ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಶಾಕರಾದ ನಾರಾ ಭರತರೆಡ್ಡಿ, ಜನಾರ್ದನರೆಡ್ಡಿ ಇಬ್ಬರ ಶಾಸಕರ ಬೆಂಬಲಿಗರ ನಡುವೆ ಘರ್ಷಣೆ ಗುರುವಾರ ರಾತ್ರಿ ಸಂಭವಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಸಾವಾಗಿದ್ದು, ಬಳ್ಳಾರಿ ಇನ್ನು ಪ್ರಕ್ಷುಬ್ದವಾಗಿದೆ.
ಘಟನೆ ತಿಳಿಗೊಳಿಸಲು 144 ಕಲಂ ಜಾರಿ ಮಾಡಲಾಗಿದೆ.
ರೆಡ್ಡಿ ಸೇರಿ ಹನ್ನೊಂದು ಜನರ ವಿರುದ್ಧ ದೂರು: ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ನಿಮಿತ್ತ ಶಾಸಕ ಜನಾರ್ದನರೆಡ್ಡಿ ಹಾಗೂ ನಗರ ಶಾಸಕ ಭರತರೆಡ್ಡಿ ಬೆಂಬಲಿಗರ ನಡುವೆ ಬ್ಯಾನರ್ ಕಟ್ಟುವ ವಿಷಯಕ್ಕೆ ಸಂಬಂಧಿಸಿದ ಘಟನೆ ಬಗ್ಗೆ ಶಾಸಕ ಜಿ.ಜನಾರ್ದನರೆಡ್ಡಿ ಸೇರಿ ಒಟ್ಟು ಹನ್ನೊಂದು ಜನರ ವಿರುದ್ಧ ತಡರಾತ್ರಿ ಪ್ರಕರಣ ದಾಖಲಾಗಿದೆ.
ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಪಾಲಿಕೆ ಸದಸ್ಯ ಮೋತ್ಕರ್ ಶ್ರೀನಿವಾಸ್ , ಮುಖಂಡರದ ಪ್ರಕಾಶ್ ರೆಡ್ಡಿ, ರಮಣ, ಪಾಲಣ್ಣ, ದಿವಾಕರ್, ಬುಡಾ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್, ದಮ್ಮೂರು ಶೇಖರ್, ಅಲಿಖಾನ್ ಸೇರಿ ಒಟ್ಟು ಹನ್ನೊಂದು ಜನರ ವಿರುದ್ಧ ಶಾಸಕ ಭರತರೆಡ್ಡಿ ಅಪ್ತ ಚಾನಾಳ್ ಶೇಖರ್ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾತ್ರಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದೋಬಸ್ತ್ ನಿಂದ ಶುಕ್ರವಾರ ಬೆಳಗ್ಗೆಯಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಶಾಸಕರಾದ ಜನಾರ್ದನರೆಡ್ಡಿ, ಭರತರೆಡ್ಡಿ, ಮಾಜಿ ಶಾಸಕರಾದ ಬಿ.ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ ಅವರ ಮನೆ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇದರ ಜತೆ ರಾಜಶೇಖರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಿಮ್ಸ್ ನಲ್ಲಿ ನಡೆಸಲಾಗುತ್ತಿದೆ. ವಿಧಿ ವಿಜ್ಞಾನ ( ಎಫ್ ಎಸ್ ಎಲ್) ತಂಡ ಪರಿಶೀಲಿಸಿದರು.
ಎಸ್ಪಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಲು ಉದ್ದೇಶಿಸಿದ್ದ ವೇದಿಕೆ ಸಿದ್ದತೆ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ನಗರದ ಡಿಸಿ ಕಚೇರಿ ಅವರಣದಲ್ಲಿ ಸಿರಿ ಧಾನ್ಯ ನಡೆ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಮೃತ ರಾಜಶೇಖರ ಕುಟುಂಬಕ್ಕೆ ಶಾಸಕ ಭರತರೆಡ್ಡಿ ಸಾಂತ್ವಾನ ಹೇಳಲು ಆಗಮಿಸಲಿದ್ದಾರೆ. ಭರತರೆಡ್ಡಿ ಈಗಾಗಲೇ ಪ್ರಕರಣ ದಾಖಲಿಸಿದ್ದರೂ, ಈ ವರೆಗೆ ರೆಡ್ಡಿ ಟೀಂ ಪ್ರಕರಣ ದಾಖಲಿಸದೆ ಕಾದು ನೋಡುವ ತಂತ್ರ ಮಾಡುತ್ತಿದೆ.
ಯಾರ ಬುಲೆಟ್: ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವು ಗಾಳಿಯಲ್ಲಿ ಗುಂಡು ಹಾರಿಸಿದ ವೇಳೆ ಬುಲೆಟ್ ತಗುಲಿ ಮೃತಪಟ್ಟಿರುವ ರಾಜಶೇಖರ.ಭರತರೆಡ್ಡಿ ಬೆಂಬಲಿಗ ಸತೀಶ ರೆಡ್ಡಿಯ ಖಾಸಗಿ ಗನ್ ಮ್ಯಾನ್ ಗಳು ಮತ್ತು ಪೊಲೀಸರಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು.
ರಾಜಶೇಖರ್ ಗೆ ತಗುಲಿದ ಗುಂಡು ಯಾರ ಬಂದೂಕಿನದ್ದು ಎನ್ನುವ ಪ್ರಶ್ನೆ ಉಂಟಾಗಿದೆ. ಒಟ್ಟು 12 ಸಾರಿ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು. ಮೂರನೇ ಬಾರಿಯೇ ಗುಂಡು ಹಾರಿಸಿದಾಗ ರಾಜಶೇಖರ್ ಗೆ ಬುಲೆಟ್ ತಗುಲಿತ್ತು ಎನ್ನಲಾಗಿದೆ.
ಯಾರ ಬುಲಿಟ್ ನಿಂದ ರಾಜಶೇಖರ್ ಮೃತರಾಗಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ರಾಜಶೇಖರ ಶವ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ವಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಯಾರ ಬುಲೆಟ್ ನಿಂದ ರಾಜಶೇಖರ ಸಾವಾಗಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.






















