ರೆಡ್ಡಿ ಬಣಗಳ ಮಧ್ಯೆ ಘರ್ಷಣೆ: ಬಳ್ಳಾರಿ ಎಸ್ಪಿ ತಲೆದಂಡ

0
4

ಬಳ್ಳಾರಿ: ಬ್ಯಾನರ್ ಅಳವಡಿಕೆ‌ ವಿಚಾರವಾಗಿ ನಡೆದ‌ ಕಾಂಗ್ರೆಸ್, ಬಿಜೆಪಿ ಶಾಸಕರ ಬೆಂಬಲಿಗರ ನಡುವೆ ಗಲಾಟೆ ನಿಯಂತ್ರಣ ಮಾಡುವಲ್ಲಿ ವಿಫಲತೆ‌ ಹಾಗೂ‌‌ ಮೇಲಧಿಕಾರಿಗಳಿಗೆ ಘಟನೆಯ ಕುರಿತು ಪೂರ್ವಾ-ಪರ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ಎನ್ನುವ ಕಾರಣಕ್ಕೆ ಬಳ್ಳಾರಿ ಎಸ್ಪಿ ಪವನ ನೆಜ್ಜೂರ ಅವರನ್ನು ಅಮಾನತು ಮಾಡಲಾಗಿದೆ.

ಬಳ್ಳಾರಿ ವಲಯ ಡಿಐಜಿ ವರ್ತಿಕಾ ಕಟಿಯಾರ ವರದಿ ಆಧರಿಸಿ ಡಿಜಿ‌ ಆಂಡ್ ಐಜಿ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಪವನ ನೆಜ್ಜೂರ್ ಜ. 1 ರಂದೇ ಅಧಿಕಾರ ಸ್ವೀಕರಿಸಿದ್ದರು. ಅದೇ ದಿನ ಸಂಜೆ ಗಲಾಟೆ ನಡೆದಿತ್ತು. ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಎಸ್ಪಿ ಅಮಾನತು ಆಗಿದ್ದಾರೆ.

Previous articleತಂದೆ – ಮಗನ ಒಗ್ಗೂಡಿಸಿದ ಇನ್‌ಸ್ಟಾಗ್ರಾಮ್