ಬಳ್ಳಾರಿ: ಗಲಭೆ ಪ್ರಕರಣದಲ್ಲಿ ಮೃತಪಟ್ಟ ರಾಜಶೇಖರ ಮೃತ ದೇಹ ಒಂದೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ವಿನಃ ಎರಡ್ಮೂರು ಬಾರಿ ನಡೆಸಿಲ್ಲ. ಆದರೆ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಈ ರೀತಿ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಅವರ ಘನತೆಯನ್ನು ಕಳೆಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬಳ್ಳಾರಿಗೆ ಭೇಟಿ ನೀಡಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಇವತ್ತು ಎಲ್ಲವನ್ನೂ ಪರಿಶೀಲನೆ ನಡೆಸಿದ್ದೇನೆ. ಡಿಎಚ್‌ಒ ಜತೆ ಚರ್ಚೆ ಮಾಡಿದ್ದೇನೆ. ಒಂದೇ ಬಾರಿ ಮರಣೋತ್ತರ ಪರೀಕ್ಷೆ ನಡೆದಿದೆ. ಆದರೆ ಕುಮಾರಸ್ವಾಮಿ ಅವರು ಯಾವ ಆಧಾರದ ಮೇಲೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ಅವರ ಬಳಿ ದಾಖಲೆ ಇದ್ದರೆ ಪ್ರದರ್ಶಿಸಲಿ, ಈ ಹಿಂದೆ ಜನಾರ್ದನ ರೆಡ್ಡಿ ಅವರಿಗೆ ಎಂತಹ ಸಂಬಂಧವಿತ್ತು? ಈಗ ಎಂತಹ ಸಂಬಂಧವಿದೆ ಎನ್ನುವುದು ನನಗೆ ಗೊತ್ತಿದೆ ಎಂದರು.
ಇದನ್ನೂ ಓದಿ: ರಾಜಶೇಖರ್ ಡಬಲ್ ಪೋಸ್ಟ್ ಮಾರ್ಟಂ: HDK ಸಮರ್ಥನೆ
ಅಸೂಯೆಯಿಂದ ವರದಿ: ಜಿಲ್ಲೆಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಅದ್ಧೂರಿ ಸಹಿಸಿಕೊಳ್ಳದೆ ಬಿಜೆಪಿ ಅಸೂಯೆಯಿಂದ ಗಲಭೆ ಎಬ್ಬಿಸಿದೆ ಎಂದು ಸತ್ಯಶೋಧನಾ ಸಮಿತಿ ವರದಿ ನೀಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.






















