Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿ ಗಲಭೆ ಪ್ರಕರಣ: FSL ತಂಡಕ್ಕೆ ಮತ್ತೊಂದು ಬುಲೆಟ್ ಪತ್ತೆ

ಬಳ್ಳಾರಿ ಗಲಭೆ ಪ್ರಕರಣ: FSL ತಂಡಕ್ಕೆ ಮತ್ತೊಂದು ಬುಲೆಟ್ ಪತ್ತೆ

0
3

ಬಳ್ಳಾರಿ: ಬಳ್ಳಾರಿಯ ಹಾವಂಬಾವಿ ಪ್ರದೇಶದಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಮುಂದೆ ಜನವರಿ 1ರಂದು ನಡೆದ ಗಲಭೆ ಮತ್ತು ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಘಟನೆ ನಡೆದು ಐದು ದಿನಗಳ ನಂತರ, ಸೋಮವಾರ ಬಾಂಬ್ ನಿಷ್ಕ್ರಿಯ ದಳ (Bomb Disposal Squad), ಸೋಕೋ (SOCO) ತಂಡ ಹಾಗೂ ಎಫ್‌ಎಸ್‌ಎಲ್ (FSL) ತಂಡಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದ ವೇಳೆ ಮತ್ತೊಂದು ಬುಲೆಟ್ ಪತ್ತೆಯಾಗಿದೆ.

ಘಟನೆಯ ಗಂಭೀರತೆಯನ್ನು ಗಮನಿಸಿ ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ವಿಶೇಷ ತಂಡಗಳನ್ನು ಕರೆಸಲಾಗಿದ್ದು, ಫೈರಿಂಗ್ ನಡೆದ ಸ್ಥಳ, ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಶೋಧನೆಯ ವೇಳೆ ಪತ್ತೆಯಾದ ಈ ಹೊಸ ಬುಲೆಟ್ ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ:  ಹಿರಿಯ ಯಕ್ಷಗಾನ ಭಾಗವತರು ಕಡತೋಕಾ ಲಕ್ಷ್ಮೀನಾರಾಯಣ ನಿಧನ

ಈಗಾಗಲೇ ಪತ್ತೆಯಾಗಿರುವ ಗುಂಡುಗಳು: ಈ ಹಿಂದೆ ನಡೆದ ತನಿಖೆಯಲ್ಲಿ, ಗಲಭೆ ಸಂದರ್ಭ ಮೃತಪಟ್ಟ ರಾಜಶೇಖರ ಅವರ ದೇಹದಲ್ಲಿ ಹೊಕ್ಕಿದ್ದ ಒಂದು ಗುಂಡು ಪತ್ತೆಯಾಗಿತ್ತು. ಇದರ ಜೊತೆಗೆ, ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಆವರಣದಲ್ಲಿ ಮೂರು ಬುಲೆಟ್‌ಗಳು ಪತ್ತೆಯಾಗಿದ್ದವು. ಇದೀಗ ಐದನೇ ಗುಂಡು ಪತ್ತೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಯಾರ ಗನ್‌ನಿಂದ ಗುಂಡು ಸಿಡಿಯಿತು?: ಹೊಸಾಗಿ ಪತ್ತೆಯಾದ ಬುಲೆಟ್ ಯಾವ ಗನ್‌ನಿಂದ ಹಾರಿಸಲಾಗಿದೆ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಈ ಕುರಿತು ಎಫ್‌ಎಸ್‌ಎಲ್ ತಂಡವು ಬುಲೆಟ್‌ಗಳ ವೈಜ್ಞಾನಿಕ ಪರಿಶೀಲನೆ ನಡೆಸುತ್ತಿದ್ದು, ಯಾವ ಪಿಸ್ತೂಲ್ ಅಥವಾ ಬಂದೂಕಿನಿಂದ ಗುಂಡು ಹೊರಟಿದೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.