ಬೆಳಗಾವಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಇರುವುದೇ ಕ್ರೀಡಾಚಟುವಟಿಕೆಗಳಿಗೆ. ಆದರೆ, ಕಾಂಗ್ರೆಸ್‌ನ ಚೀಪ್ ಮೆಂಟಾಲಿಟಿ ಮತ್ತು ಅಶಿಸ್ತಿನಿಂದ ಅವಘಡ ಸಂಭವಿಸಿದೆ. ಇನ್ನಾದರೂ ತಪ್ಪುಗಳನ್ನು ತಿದ್ದಿಕೊಂಡು ಜವಾಬ್ದಾರಿ ಮೆರೆಯಬೇಕಿದೆ ಎಂದು ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.
ಸುವರ್ಣ ಸೌಧದ ಮೊಗಸಾಲೆಯಲ್ಲಿ ಗುರುವಾರ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆರಂಭ ಮಾಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟಗಳು ನಡೆಯಬೇಕು ಎಂಬುದು ಇಡೀ ರಾಜ್ಯದ ಜನರ ಆಶಯ. ಕಾಂಗ್ರೆಸ್ ಸರ್ಕಾರದ ಮೂರ್ಖತನದ ಪರಮಾವಧಿಯಿಂದ ಆಟಗಳು ನಿಂತು ಹೋಗಿವೆ. ಕಾಮನ್ ಸೆನ್ಸ್ ಇಲ್ಲದ ಸರ್ಕಾರ, ಇನ್ನಾದರೂ ಆಟಗಳನ್ನು ಆರಂಭಿಸಲಿ ಎಂದು ಆಗ್ರಹಿಸಿದರು.























