ಕ್ರಶಿಂಗ್ ಬೆಲ್ಟ್‌ಗೆ ಸಿಲುಕಿ ದಿನಗೂಲಿ ಕಾರ್ಮಿಕ ಸಾವು – ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿರುವ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕನೋರ್ವ ಕ್ರಶಿಂಗ್ ಬೆಲ್ಟ್‌ಗೆ ಸಿಲುಕಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತ ಕಾರ್ಮಿಕನನ್ನು ಸಚೀನ ಬಸಪ್ಪ ದ್ಯಾಮಣ್ಣಿ (36) ಎಂದು ಗುರುತಿಸಲಾಗಿದೆ. ಅವರು ಹುಕ್ಕೇರಿ ತಾಲೂಕಿನ ಅಮ್ಮಿನಭಾವಿ ಗ್ರಾಮದ ನಿವಾಸಿಯಾಗಿದ್ದಾರೆ.
ಕೆಲಸದ ವೇಳೆ ಸಂಭವಿಸಿದ ಅಪಘಾತ: ಮೃತ ಸಚೀನ ಅವರು ಸಕ್ಕರೆ ಕಾರ್ಖಾನೆಯ ಕ್ರಶಿಂಗ್ ಬೆಲ್ಟ್ ಪ್ರದೇಶದಲ್ಲಿ ಸುಣ್ಣ ಒಗೆಯುವ ಕೆಲಸ ಮಾಡುತ್ತಿರುವ ವೇಳೆ ಆಯ ತಪ್ಪಿ ಬಿದ್ದು, ಚಲಿಸುತ್ತಿದ್ದ ಕ್ರಶಿಂಗ್ ಬೆಲ್ಟ್‌ಗೆ ಸಿಲುಕಿಕೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೋಗಿಲು ಬಡಾವಣೆ ಪ್ರಕರಣ: BJP ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ
10 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಕಾರ್ಮಿಕ: ಸಚೀನ ಅವರು ದಿನಗೂಲಿ ಆಧಾರದ ಮೇಲೆ ಕೇವಲ 10 ದಿನಗಳ ಹಿಂದಷ್ಟೇ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಕುಟುಂಬದ ಜೀವನ ಸಾಗಿಸಲು ಕೆಲಸಕ್ಕೆ ಬಂದಿದ್ದ ಯುವ ಕಾರ್ಮಿಕನ ಹಠಾತ್ ಸಾವಿನಿಂದ ಕುಟುಂಬಸ್ಥರು ಮತ್ತು ಗ್ರಾಮದಲ್ಲಿ ಶೋಕ ಆವರಿಸಿದೆ.
ಸ್ಥಳಕ್ಕೆ ಪೊಲೀಸರ ಭೇಟಿ: ಘಟನೆಯ ಮಾಹಿತಿ ಪಡೆದ ತಕ್ಷಣ ಸಂಕೇಶ್ವರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರ ಪಾಲಿಕೆಗಳ ಚುನಾವಣೆಗೆ ದಿನಾಂಕ ಫಿಕ್ಸ್
ಕಾರ್ಮಿಕರ ಸುರಕ್ಷತೆ ಕುರಿತು ಪ್ರಶ್ನೆಗಳು: ಸಕ್ಕರೆ ಕಾರ್ಖಾನೆಗಳಲ್ಲಿ ನಡೆಯುವ ಅಪಾಯಕಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಸುರಕ್ಷತಾ ಕ್ರಮಗಳು ಪಾಲನೆಯಾಗುತ್ತಿದ್ದವೆಯೇ? ದಿನಗೂಲಿ ಕಾರ್ಮಿಕರಿಗೆ ಅಗತ್ಯ ತರಬೇತಿ ಮತ್ತು ರಕ್ಷಣಾ ಉಪಕರಣಗಳು ಒದಗಿಸಲಾಗಿದ್ದವೆಯೇ?ಎಂಬ ಪ್ರಶ್ನೆಗಳು ಮತ್ತೊಮ್ಮೆ ಎದ್ದುಕಾಣುತ್ತಿವೆ.








