ಬೆಳಗಾವಿ: ಉಪ ಆಯುಕ್ತರ ವರ್ಗಾವಣೆಗೆ ಪಾಲಿಕೆ ನಗರಸೇವಕರ ಒತ್ತಾಯ

0
53

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಉಪಆಯುಕ್ತೆ ರೇಷ್ಮಾ ತಾಳಿಕೋಟಿ ಅವರನ್ನು ತಕ್ಷಣವೇ ಬೇರೆಡೆ ನಿಯುಕ್ತಿ ಮಾಡುವಂತೆ ನಗರಸೇವಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮೇಯರ್ ಕೊಠಡಿಯಲ್ಲಿ ಸಭೆ ನಡೆಸಿದ ಬಿಜೆಪಿ ನಗರಸೇವಕರು ಪಾಲಿಕೆ ಆಯುಕ್ತರ ಮೂಲಕ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ರವಾನಿಸಿದ್ದಾರೆ.

ಕಳೆದ ಸೆಪ್ಟೆಂಬರ್ 26ರಂದು ನಡೆದ ಪರಿಷತ್ ಸಭೆಯಲ್ಲಿ ಗೊತ್ತುವಳಿ ಸಂಖ್ಯೆ 266 ಅಡಿಯಲ್ಲಿ ಕಂದಾಯ ಉಪ ಆಯುಕ್ತರ ಕುರಿತಂತೆ ಠರಾವ್‌ನ್ನು ತೆಗೆದುಕೊಳ್ಳಲಾಗಿತ್ತು. ಉಪಆಯುಕ್ತರ ವಿರುದ್ಧ ಹಲವಾರು ಗಂಭೀರ ದೂರುಗಳು ದಾಖಲಾಗಿರುವುದೇ ಈ ಕ್ರಮಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಆರೋಪಗಳು ಯಾವುವು?: ಇ-ಆಸ್ತಿ, ಪಿ.ಐ.ಡಿ ಹಾಗೂ ಲೀಜ್ ಅವಧಿ ಮುಗಿದ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಮತ್ತು ಖಾಲಿ ಮಾಡುವ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ
ನ್ಯಾಯಾಲಯದ ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿರುವುದು, ಸ್ಥಾಯಿ ಸಮಿತಿ ಹಾಗೂ ಪರಿಷತ್ ಸಭೆಗಳಿಗೆ ಅಗತ್ಯ ಟಿಪ್ಪಣಿಗಳನ್ನು ನೀಡದೆ, ಕೆಳಹುದ್ದೆಯ ಅಧಿಕಾರಿಗಳಿಂದ ಸಿದ್ಧಪಡಿಸಿದ ವರದಿಗಳನ್ನು ಸಲ್ಲಿಸುವುದು.

ವೇಗಾ ಹೆಲೈಟ್ ತೆರಿಗೆ ವಂಚನೆ ಪ್ರಕರಣದಲ್ಲಿ 5 ಸದಸ್ಯರ ಸಮಿತಿಯೊಂದಿಗೆ ಗಂಭೀರ ಆರೋಪ ಎದುರಿಸುತ್ತಿರುವುದು ಸೇರಿದಂತೆ ಇನ್ನೂ ಕೆಲ ಗುರುತರ ಆರೋಪಗಳು ಉಪ ಆಯುಕ್ತೆ ರೇಷ್ಮಾ ಮೇಲಿವೆ.

ಪರಿಷತ್ ಸಭೆಯಲ್ಲೇ ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಒಪ್ಪಿಸುವ ನಿಧರ್ಾರ ಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಉಪಆಯುಕ್ತರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ಮೇಯರ್ ಅವರು ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ಆಡಳಿತದಲ್ಲಿ ಸುಧಾರಣೆ ತರಲು ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಈ ನಿಧರ್ಾರ ಕೈಗೊಳ್ಳಲಾಗಿದೆ ಎಂದು ನಗರಸೇವಕರು ಸ್ಪಷ್ಟಪಡಿಸಿದ್ದಾರೆ.

ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಸೇರಿದಂತೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Previous articleಪ್ಯಾರಾ ಅಥ್ಲೆಟಿಕ್ಸ್ : ಯೋಗೇಶ್ ಕಥುನಿಯಾ ಬೆಳ್ಳಿ ಗೆಲುವು
Next articleಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಕರ್ನಾಟಕ-2025: ಡಾ.ರಾಮಚಂದ್ರ ಗುಹಾ ಆಯ್ಕೆ

LEAVE A REPLY

Please enter your comment!
Please enter your name here