ನನ್ನ ಷರತ್ತು ಒಪ್ಪಿದರೆ ಮಾತ್ರ ಬಿಜೆಪಿಗೆ ಹೋಗುವೆ: ಯತ್ನಾಳ್

0
3

ಬೆಳಗಾವಿ: ಸುಮ್ಮನೇ ಶಾಸಕನಾಗಿ ಮತ್ತೇ ಬಿಜೆಪಿಗೆ ವಾಪಸ್​ ಬರಲ್ಲ. ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ ನೀಡಿದರೆ ಮಾತ್ರ ಬರುತ್ತೇನೆ ಎಂದು ಹೇಳಿರುವುದಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿಂದು ಮಾತನಾಡಿರುವ ಅವರು, ಘರ್ ವಾಪಸ್ಸಿ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಸುವರ್ಣಸೌಧದಲ್ಲಿನ ವಿಪಕ್ಷ ನಾಯಕರ ಕಚೇರಿಯಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದು, ವಾಪಸ್ ಪಕ್ಷಕ್ಕೆ ಕರೆತರುವ ಬಗ್ಗೆ ಚರ್ಚಿಸಿದ್ದಾರೆ ಎಂದು ಸ್ವತಃ ಯತ್ನಾಳ್ ಅವರೇ ಹೇಳಿದ್ದಾರೆ.

ನಮ್ಮ ಹೋರಾಟಕ್ಕೆ ಜನ ಸೇರುತ್ತಿಲ್ಲ. ಯತ್ನಾಳ್‌ ಹೋದಲೆಲ್ಲಾ ಸಾವಿರಾರು ಜನರು ಸೇರುತ್ತಾರೆ. ಜನಪ್ರಿಯತೆ ಹೆಚ್ಚಾಗಿರುವುದರಿಂದ ಮತ್ತೆ ಬಿಜೆಪಿಗೆ ವಾಪಸ್‌ ಕರೆತರೋಣ ಎಂದಿದ್ದಾರೆ ಎಂದು ಬಿಜೆಪಿ ನಾಯಕ ಅಭಿಪ್ರಾಯವನ್ನು ಬಿಚ್ಚಿಟ್ಟರು.

‌ಇದನ್ನೂ ಓದಿ: ಡಿಕೆಶಿ‌ ಬಿಜೆಪಿಗೆ ಕರೆತರುವ ಪ್ರಯತ್ನ ನಡೆದಿತ್ತು: ಯತ್ನಾಳ ಹೊಸ ಬಾಂಬ್

ಸುಮ್ಮನೇ ಶಾಸಕನಾಗಿ ಮತ್ತೇ ಬಿಜೆಪಿಗೆ ವಾಪಸ್​ ಬರಲ್ಲ. ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ ನೀಡಿಬೇಕು. ಇದಕ್ಕೆ ಅಮಿತ್‌ ಶಾ ಒಪ್ಪಿಕೊಂಡರೆ ಮಾತ್ರ ಬಿಜೆಪಿಗೆ ಹೋಗುತ್ತೇನೆ. ಇಲ್ಲವಾದಲ್ಲಿ ನಾವೇ ಜೆಸಿಬಿ ಪಕ್ಷವನ್ನು ಕಟ್ಟುತ್ತೇವೆ ಎಂದು ಯತ್ನಾಳ್‌ ತಿಳಿಸಿದರು.

Previous articleಡಿಕೆಶಿ‌ ಬಿಜೆಪಿಗೆ ಕರೆತರುವ ಪ್ರಯತ್ನ ನಡೆದಿತ್ತು: ಯತ್ನಾಳ ಹೊಸ ಬಾಂಬ್