ಬೆಳಗಾವಿ: ಎಥೆನಾಲ್ ಖರೀದಿಯ ಪ್ರಮಾಣವನ್ನು ಶೇ. 30 ಕ್ಕೆ ಸೀಮಿತಗೊಳಿಸಿರುವ ಕಾರಣದಿಂದಾಗಿಯೇ ಗೋವಿನ ಜೋಳ ಬೆಲೆ ಕುಸಿತಗೊಂಡಿದೆ ಎಂದು ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆ ವೇಳೆ ಸಕ್ಕರೆ ಕಾರ್ಖಾನೆಗಳ ವಿಷಯವಾಗಿ ಯತ್ನಾಳ ಮಾತನಾಡಿದ ನಂತರ ಈ ವಿಷಯದ ಕುರಿತು ಮಾತನಾಡಿದ ಸವದಿ, ಈ ಹಿಂದೆ ಎಲ್ಲ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಗೆ ಆದ್ಯತೆ ನೀಡಿದವು, ಆದರೆ ಎಥೆನಾಲ್ ಖರೀದಿಯ ಪ್ರಮಾಣವನ್ನು ಕೇಂದ್ರ ಸರ್ಕಾರ ಶೇ. 30ಕ್ಕೆ ಸೀಮಿತಗೊಳಿಸಿದೆ, ಆದರೆ ಗುಜರಾತ್‌ನಿಂದ ಶೇ. 100 ರಷ್ಟು, ಮಹಾರಾಷ್ಟ್ರದಿಂದ ಶೇ. 60 ರಷ್ಟು ಎಥೆನಾಲ್ ಖರೀದಿಗೆ ಅವಕಾಶ ನೀಡಿ, ನಮ್ಮ ರಾಜ್ಯದ ಎಥೆನಾಲ್‌ಗೆ ಶೇ. 30 ರಷ್ಟು ಸೀಮಿತಗೊಳಿಸಿರುವುದು ಎಷ್ಟು ಸರಿ? ಇದರಿಂದಾಗಿಯೇ ಗೋವಿನಜೋಳ ಬೆಲೆ ಕುಸಿತ ಕಾಣಲು ಕಾರಣ ಎಂದು ವಿಶ್ಲೇಷಿಸಿದರು.






















