ಚಿಕ್ಕೋಡಿ: ಹಿರೇಕೋಡಿ ಗ್ರಾಮದಲ್ಲಿರುವ ಶ್ರೀ ಮೋರಾರರ್ಜಿ ವಸತಿ ನಿಲಯದಲ್ಲಿ ಉಪಹಾರ ಸೇವಿಸಿ 60 ಕ್ಕಿಂತ ಹೆಚ್ಚು ಮಕ್ಕಳು ಅಶ್ವಸ್ಥರಾಗಿರುವ ಘಟನೆ ಶುಕ್ರವಾರ ನಡೆದಿದೆ.
ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಶ್ರೀ ಮೋರಾರರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು .ಬೆಳಿಗ್ಗೆ ಉಪ್ಪಿಟ್ಟು ಸೇವನೆ ಮಾಡಿದ ಪರಿಣಾಮವಾಗಿ 60 ಕಿಂತ ಹೆಚ್ಚು ಮಕ್ಕಳು ಹೊಟ್ಟೆನೋವಿನಿದ ಬಳಲುತ್ತಿದ್ದಾರೆ. ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಡಿಎಚ್ ಈ ಡಾ.ಎಸ್ ಎಸ್.ಗಡೇದ ಅವರು ತಿಳಿಸಿದ್ದಾರೆ.
ಬೆಳಿಗ್ಗೆ ಉಪ ಆಹಾರವಾಗಿ ಉಪ್ಪಿಟ್ಟು ಸೇವಿಸಿದರ ಪರಿಣಾಮವಾಗಿ ಈ ದುರ್ಘಟನೆ ನಡೆದಿದೆ. ಆಸ್ಪತ್ರೆಗೆ ಡಿಡಿಪಿಐ ಸೀತಾರಾಮು ಆರ್.ಎಸ್.,ಟಿಎಚ್ ಓ ಡಾ.ಸುಕಮಾರ ಬಾಗಾಯಿ,ಭೇಟ್ಟಿ ನೀಡಿದರು. ಶ್ರೀ.ಮೋರಾರರ್ಜಿ ದೇಸಾಯಿ ವಸತಿ ನಿಲಯದ ಸಿಬ್ಬಂದಿಗಳ ಬೇಜವಾಬ್ದಾರಿಂದ ಈ ಘಟನೆ ನಡೆದಿದೆ ಎಂದು ಪಾಲಕರು ಆರೋಪಿಸಿದ್ದಾರೆ. ತನಿಖೆಯಿಂದಷ್ಟ ನಿಖರವಾದ ಮಾಹಿತಿ ಲಭ್ಯವಾಗಲಿದೆ.