Home Advertisement
Home ನಮ್ಮ ಜಿಲ್ಲೆ ಬೆಳಗಾವಿ ₹400 ಕೋಟಿ ದರೋಡೆ ಕೇಸ್​​ಗೆ ಬಿಗ್‌ ಟ್ವಿಸ್ಟ್​​​​​: 7 ಆರೋಪಿಗಳ ಬಿಡುಗಡೆ

₹400 ಕೋಟಿ ದರೋಡೆ ಕೇಸ್​​ಗೆ ಬಿಗ್‌ ಟ್ವಿಸ್ಟ್​​​​​: 7 ಆರೋಪಿಗಳ ಬಿಡುಗಡೆ

0
35

ಬೆಳಗಾವಿ: ಗಡಿನಾಡಿನ ಕಾಡು ಮಾರ್ಗವಾದ ಚೋರ್ಲಾ ಘಾಟನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ಮೌಲ್ಯದ ಕಂಟೇನರ್ ದರೋಡೆ ಪ್ರಕರಣ ಕೊನೆಗೆ `ಸುಳ್ಳು’ ದೂರಿನ ಕಥೆಯಾಗಿ ಹೊರಬಿದ್ದಿದೆ.

ಈ ಪ್ರಕರಣ ಬೆಳಕಿಗೆ ಬಂದಾಗಿನಿಂದ ಸಂಯುಕ್ತ ಕರ್ನಾಟಕ ಮಾತ್ರ ದರೋಡೆ ಪ್ರಕರಣ ದಾರಿ ತಪ್ಪಿದ ಕಥೆಯೇ? ಮತ್ತು 400 ಕೋಟಿ ನಾಪತ್ತೆ ಕೇಸಲ್ಲಿ ಬರೀ ಗೊಂದಲ ಎನ್ನುವ ಶೀರ್ಷಿಕೆಯಡಿ ವರದಿಯನ್ನು ಪ್ರಕಟಿಸಿತ್ತು.

ಈ ಮಹಾ ಸರ್ಕಾರ ರಚನೆ ಮಾಡಿದ ಎಸ್‌ಐಟಿ ಕೂಡ ಇದೇ ಅಂಶವನ್ನು ಮುಂದಿಟ್ಟುಕೊಂಡು 400 ಕೋಟಿ ರೂ. ದರೋಡೆ ಕೇಸ್ ಸುಳ್ಳು ಎನ್ನುವ ವರದಿಯನ್ನು ನೀಡಿದೆ.

ಇದನ್ನೂ ಓದಿ: ಶಿವರಾತ್ರಿಯಂದೇ ಶಿವನ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು

ಮಹಾರಾಷ್ಟ್ರದ ಇಗಟಾಪುರಿ ನ್ಯಾಯಾಲಯಕ್ಕೆ ಸಲ್ಲಿಸಲಾದ ವಿಶೇಷ ತನಿಖಾ ತಂಡದ ವರದಿ ನಂತರ, ಬಂಧಿತರಾದ ಏಳು ಮಂದಿಗೂ ಸಂಪೂರ್ಣ ವಿಮೋಚನೆ ಲಭಿಸಿದೆ.
ನಾಶಿಕ್ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಸಂದೀಪ ಪಾಟೀಲ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿತ್ತು.

ಸುಳ್ಳು ದೂರಿನ ಆರೋಪದ ಹಿನ್ನೆಲೆಯಲ್ಲಿ ದೂರುದಾರ ಸಂದೀಪ್ ಪಾಟೀಲ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಒಂದು ತಿಂಗಳ ಕಾಲ ಪೊಲೀಸ್ ಆಡಳಿತವನ್ನು ದಿಕ್ಕುತಪ್ಪಿಸಿದ್ದರ ಹಿನ್ನೆಲೆಯಲ್ಲಿ, ಮುಂದಿನ ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ.

Previous articleಶಿವರಾತ್ರಿಯಂದೇ ಶಿವನ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು
Next articleಮಾದಪ್ಪನ ಬೆಟ್ಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ ಪತ್ನಿ, ಮಗಳು ಭೇಟಿ