Home Advertisement
Home ನಮ್ಮ ಜಿಲ್ಲೆ ಬೆಳಗಾವಿ ₹400 ಕೋಟಿ ದರೋಡೆ ಕೇಸ್​​ಗೆ ಬಿಗ್‌ ಟ್ವಿಸ್ಟ್​​​​​: 7 ಆರೋಪಿಗಳ ಬಿಡುಗಡೆ

₹400 ಕೋಟಿ ದರೋಡೆ ಕೇಸ್​​ಗೆ ಬಿಗ್‌ ಟ್ವಿಸ್ಟ್​​​​​: 7 ಆರೋಪಿಗಳ ಬಿಡುಗಡೆ

0
442

ಬೆಳಗಾವಿ: ಗಡಿನಾಡಿನ ಕಾಡು ಮಾರ್ಗವಾದ ಚೋರ್ಲಾ ಘಾಟನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ಮೌಲ್ಯದ ಕಂಟೇನರ್ ದರೋಡೆ ಪ್ರಕರಣ ಕೊನೆಗೆ `ಸುಳ್ಳು’ ದೂರಿನ ಕಥೆಯಾಗಿ ಹೊರಬಿದ್ದಿದೆ.

ಈ ಪ್ರಕರಣ ಬೆಳಕಿಗೆ ಬಂದಾಗಿನಿಂದ ಸಂಯುಕ್ತ ಕರ್ನಾಟಕ ಮಾತ್ರ ದರೋಡೆ ಪ್ರಕರಣ ದಾರಿ ತಪ್ಪಿದ ಕಥೆಯೇ? ಮತ್ತು 400 ಕೋಟಿ ನಾಪತ್ತೆ ಕೇಸಲ್ಲಿ ಬರೀ ಗೊಂದಲ ಎನ್ನುವ ಶೀರ್ಷಿಕೆಯಡಿ ವರದಿಯನ್ನು ಪ್ರಕಟಿಸಿತ್ತು.

ಈ ಮಹಾ ಸರ್ಕಾರ ರಚನೆ ಮಾಡಿದ ಎಸ್‌ಐಟಿ ಕೂಡ ಇದೇ ಅಂಶವನ್ನು ಮುಂದಿಟ್ಟುಕೊಂಡು 400 ಕೋಟಿ ರೂ. ದರೋಡೆ ಕೇಸ್ ಸುಳ್ಳು ಎನ್ನುವ ವರದಿಯನ್ನು ನೀಡಿದೆ.

ಇದನ್ನೂ ಓದಿ: ಶಿವರಾತ್ರಿಯಂದೇ ಶಿವನ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು

ಮಹಾರಾಷ್ಟ್ರದ ಇಗಟಾಪುರಿ ನ್ಯಾಯಾಲಯಕ್ಕೆ ಸಲ್ಲಿಸಲಾದ ವಿಶೇಷ ತನಿಖಾ ತಂಡದ ವರದಿ ನಂತರ, ಬಂಧಿತರಾದ ಏಳು ಮಂದಿಗೂ ಸಂಪೂರ್ಣ ವಿಮೋಚನೆ ಲಭಿಸಿದೆ.
ನಾಶಿಕ್ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಸಂದೀಪ ಪಾಟೀಲ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿತ್ತು.

ಸುಳ್ಳು ದೂರಿನ ಆರೋಪದ ಹಿನ್ನೆಲೆಯಲ್ಲಿ ದೂರುದಾರ ಸಂದೀಪ್ ಪಾಟೀಲ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಒಂದು ತಿಂಗಳ ಕಾಲ ಪೊಲೀಸ್ ಆಡಳಿತವನ್ನು ದಿಕ್ಕುತಪ್ಪಿಸಿದ್ದರ ಹಿನ್ನೆಲೆಯಲ್ಲಿ, ಮುಂದಿನ ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ.