ಬೆಳಗಾವಿ: ಪಂಚಮಸಾಲಿ ಟ್ರಸ್ಟ್ ಕಳ್ಳರ ಕುಟುಂಬ – ಯತ್ನಾಳ್

0
29

ಹುಕ್ಕೇರಿ: ಕೂಡಲಸಂಗಮ ಪಂಚಮಸಾಲಿ ಪೀಠಕ್ಕೂ ಮತ್ತು ಟ್ರಸ್ಟಿಗೂ ಸಂಬಂಧವಿಲ್ಲ. ಟ್ರಸ್ಟ್‌ನವರು ಉಚ್ಚಾಟನೆ ಮಾಡಿದರೂ ಪೀಠಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳೇ ಜಗದ್ಗುರು ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿಗಳು ಆಸ್ತಿ ಮಾಡಿದ್ದಾರೆ ಎಂಬುದು ಸುಳ್ಳು. ಆಸ್ತಿಗೂ ಸ್ವಾಮೀಜಿಯವರಿಗೂ ಸಂಬಂಧವಿಲ್ಲ. ಅದು ಟ್ರಸ್ಟಿನ ಆಸ್ತಿ ಆಗಿದ್ದು ಸ್ವಾಮೀಜಿಯವರದು ಎಂಬ ದಾಖಲೆಗಳಿದ್ದರೆ ಅದನ್ನು ಬಿಡುಗಡೆಗೊಳಿಸಲಿ. ಪಂಚಮಸಾಲಿ ಸಮಾಜದ ಟ್ರಸ್ಟ್ ಮಾಡಿಕೊಂಡವರದು ಒಂದು ಕಳ್ಳರ ಕುಟುಂಬ ಎಂದು ಛೇಡಿಸಿದರು.

ಸಂವಿಧಾನದಲ್ಲಿ ಲಿಂಗಾಯತ ಮತ್ತು ವೀರಶೈವ ಎಂಬ ಧರ್ಮಕ್ಕೆ ಮಾನ್ಯತೆ ಇಲ್ಲ. ಅದಕ್ಕಾಗಿ ಹಿಂದೂ ಪದ ಬಳಸಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದ್ವಂದ್ವದಲ್ಲಿದ್ದಾರೆ. ರಾಹುಲ್ ಗಾಂಧಿ ಮುಸ್ಲಿಂ ರಾಷ್ಟ್ರವೆಂದರೆ, ಸೋನಿಯಾ ಗಾಂಧಿ ಕ್ರಿಶ್ಚಿಯನ್ ರಾಷ್ಟ್ರ ಮಾಡಲು ಹೇಳುತ್ತಿದ್ದಾರೆ. ಇದರಿಂದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಎರಡರ ನಡುವಿನ ಗೊಂದಲದಲ್ಲಿ ಸಿದ್ದರಾಮಯ್ಯ ಅವರು ಸಿಕ್ಕೆ ಹಾಕಿಕೊಂಡಿದ್ದಾರೆಂದು ವ್ಯಂಗ್ಯವಾಡಿದರು.

Previous articleವಿಜಯಪುರ: ಉಕ್ಕಿ ಹರಿಯುತ್ತಿರುವ ಭೀಮೆ – ಹೆದ್ದಾರಿ ರಸ್ತೆ ಸಂಪರ್ಕ ಕಡಿತ
Next articleಹುಬ್ಬಳ್ಳಿ: ಸಾಹಿತಿ ಎಸ್.ಎಲ್. ಭೈರಪ್ಪ ನಿಧನಕ್ಕೆ ಗಣ್ಯರ ಸಂತಾಪ

LEAVE A REPLY

Please enter your comment!
Please enter your name here