ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಅಧಿವೇಶನದ ಹಿನ್ನೆಲೆಯಲ್ಲಿ MES ಮುಖಂಡರ “ಮಹಾಮೇಳಾವ್” ಯತ್ನಗಳು ಹಾಗೂ ಗಡಿಭಾಗದ ಚಟುವಟಿಕೆಗಳ ಬಗ್ಗೆ ಹೆಚ್ಚುತ್ತಿರುವ ಚಟುವಟಿಕೆಗಳನ್ನು ತಡೆಯಲು ಗಡಿಭಾಗ ವಲಯಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಗಡಿಭಾಗ ಕಟ್ಟು ಪರಿಶೀಲನೆ: ದಕ್ಷಿಣ ಗಡಿ ಭಾಗದ ಕೋಗನೋಳಿ ಚೆಕ್ ಪೋಸ್ಟ್ ಸೇರಿದಂತೆ. ಕೊಲ್ಹಾಪುರ ಹಿಂಬದಿಯಿಂದ ಆಗಮಿಸುತ್ತಿರುವ MES ಪುಂಡರ ಚಟುವಟಿಕೆ ಹಿನ್ನಲೆಯಲ್ಲಿ ಪ್ರವೇಶ ನಿರ್ಬಂಧ ವಿಧಿಸಿದ್ದು. ಶಿವಸೇನೆ ಅಥವಾ MES-ಮುಖಂಡರ ಯಾವುದೇ ಗುಂಪು ಚಟುವಟಿಕೆಗಳನ್ನು ನಿರಂತರ ವೀಕ್ಷಣೆ ನಡೆಸಿದ್ದು. ವ್ಯಾಕ್ಸಿನ್ ಡಿಪೋ ಸೇರಿದಂತೆ ಸಾರ್ವಜನಿಕ ಸ್ಥಳಗಳ ಬಳಿ ಅಧಿಕಾರಿಗಳು ತಕ್ಷಣ ಸಂಘಟನೆಯವರನ್ನು ಚದುರಿಸಿದ್ದಾರೆ.
ಪೋಲೀಸ್ ಇಲಾಖೆಗೆ ನಾಲ್ಕು ಸ್ಥಳ ಪ್ರಸ್ತಾಪ – ಆದರೆ ಅನುಮತಿ ರದ್ದು: MES ಈ ಬಾರಿ ಮಹಾಮೇಳಾವ್ ನಡೆಸಲು ನಾಲ್ಕು ಸಂಭಾವ್ಯ ಸ್ಥಳಗಳ ಪ್ರಸ್ತಾಪಗಳನ್ನು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದೆ. ಆದರೆ, ಅಧಿವೇಶನ ಸಮಯದಲ್ಲಿ ನೈಜ ಉದ್ವಿಗ್ನತೆ, ಸಾರ್ವಜನಿಕ ಹಿತ ಮತ್ತು ಕಾನೂನು ಸುವ್ಯವಸ್ಥೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಸಮಾವೇಶಕ್ಕೆ ಸ್ಪಷ್ಟವಾಗಿ ಅನುಮತಿ ನಿರಾಕರಿಸಿದೆ.
ನಗರದಲ್ಲಿ ಕಟ್ಟು ನಿಟ್ಟಿನ ಭದ್ರತೆ: ಅಧಿವೇಶನಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಪೊಲೀಸ್ ಬಲದ ಹೆಚ್ಚುವರಿ ನಿಯೋಜನೆ ಮಾಡಲಾಗಿದ್ದು. MES ಬೆಂಬಲಿಗರ ಗುಂಪುಗೂಡಿಕೆ, ಅಕಸ್ಮಾತ್ ಮೆರವಣಿಗೆ ಹಾಗೂ ಘೋಷಣೆಗಳನ್ನು ತಡೆಯಲು ವಾಚ್ ತಂಡ ನಿಯೋಜಿಸಲಾಗಿದೆ. ಗಡಿಭಾಗ ಮತ್ತು ಚುರುಕು ಪ್ರದೇಶಗಳಲ್ಲಿ ಗುಪ್ತಚರ ಘಟಕ ಸಕ್ರಿಯವಾಗಿದ್ದು. ಹಿರಿಯ ಪೊಲೀಸ್ ಅಧಿಕಾರಿಗಳು ನಿಯಮಿತ ವೀಕ್ಷಣಾ ತಪಾಸಣೆ ನಡೆಸುತ್ತಿದ್ದಾರೆ.
























Ycel777, decent experience. Deposit and withdrawal process is smooth. Overall, not bad at all. Sana palarin tayo! Check them out: ycel777