ಬೆಳಗಾವಿ: ದೇಶಕ್ಕೆ ಅನ್ನ ನೀಡುವ ರೈತರ ಮಕ್ಕಳನ್ನು ಮದುವೆ ಆಗಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಇವರನ್ನು ಮದುವೆ ಆಗುವ ಯುವತಿಯ ಹೆಸರಿನಲ್ಲಿ ಸರ್ಕಾರವೇ 10 ಲಕ್ಷ ರೂ. ಠೇವಣಿ ಇಡಬೇಕು ಎಂಬ ವಿಷಯವನ್ನು ಪರಿಷತ್ ಶೂನ್ಯವೇಳೆ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಪುಟ್ಟಣ್ಣ ಸರಕಾರದ ಗಮನ ಸೆಳೆದರು.
ರೈತ ಇಲ್ಲದಿದ್ದರೆ ಎಲ್ಲರ ಸ್ಥಿತಿ ಗಂಭೀರ. ಆದರೆ, ಈಗ ರೈತರ ಮಕ್ಕಳಿಗೆ ಕನ್ಯೆ ಸಿಗುತ್ತಿಲ್ಲ. ಪರಿಣಾಮ ನಮಗೆ ಮಠಗಳನ್ನು ಕಟ್ಟಿಕೊಡಿ ಎಂದು ಅದೇಷ್ಟೋ ಜನ ವಿನಂತಿಸುತ್ತಿದ್ದಾರೆ. ಮಠಮಾನ್ಯಗಳಿಗೆ ಪಾದಯಾತ್ರೆ ಹೋಗಿ ಮದುವೆಗಾಗಿ ಹರಕೆ ಹೊರುತ್ತಿದ್ದಾರೆ. ಹೀಗಾಗಿ ಅವರ ಬೆಂಬಲಕ್ಕೆ ಸರ್ಕಾರ ನಿಲ್ಲಬೇಕು. ರೈತಾಪಿ ವರ್ಗದವರನ್ನು ಮದುವೆ ಆಗುವ ಹೆಣ್ಣುಮಕ್ಕಳ ಹೆಸರಲ್ಲಿ 10 ಲಕ್ಷ ರೂ. ಬ್ಯಾಂಕ್ ಠೇವಣಿ ಇಡಬೇಕು. ಇದು ಅತ್ಯವಶ್ಯಕವಾಗಿದೆ. ಇಲ್ಲದಿದ್ದರೆ ರೈತರ ಸಂತತಿಯೇ ಇಲ್ಲದಂತಾಗುತ್ತದೆ ಎಂದು ಸಭೆಯ ಗಮನ ಸೆಳೆದರು.






















