ತ್ರಿವಿಧ ದಾಸೋಹಿರತ್ನ ಚಕ್ರವರ್ತಿ ದಾನೇಶ್ವರ ಶ್ರೀ ವಿಧಿವಶ

0
5

ಇಹಲೋಕ ತ್ಯಜಿಸಿದ ಆಘಾತಕ್ಕೆ ಕುಸಿದು ಬೀಳುತ್ತಿರುವ ಭಕ್ತರು

ಬಾಗಲಕೋಟೆ: ತ್ರಿವಿಧ ದಾಸೋಹಿ, ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮ-2024ರ ಪ್ರಶಸ್ತಿ ಪುರಸ್ಕ್ರತರಾದ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಮಠದ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ದಾನೇಶ್ವರಶ್ರೀ ತಮ್ಮ 76ನೇ ವಯಸ್ಸಿನಲ್ಲಿ ಶುಕ್ರವಾರ ಬೆಳಗಿನ ಜಾವ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜೀವ ತ್ಯಜಿಸಿದರು.ಹಲವು ದಿನಗಳಿಂದ ಯಕೃತ ಸಮಸ್ಯೆಯಿಂದ ಬಳಲುತ್ತಿದ್ದ ದಾನೇಶ್ವರಶ್ರೀಗಳಿಗೆ ಹುಬ್ಬಳ್ಳಿ ಹಾಗೂ ಬೆಳಗಾವಿಯ ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ 15 ದಿನಗಳಿಂದ ಚಿಕಿತ್ಸೆ ನಡೆದಿತ್ತು. ಜೀವನ್ಮರಣದ ಮಧ್ಯೆ ಶುಕ್ರವಾರ ವಿಧಿವಶರಾರೆಂದು ಮಠದ ಮೂಲಗಳಿಂದ ತಿಳಿದು ಬಂದಿದೆ.

ಶ್ರೀಗಳ ಅಂತ್ಯಕ್ರಿಯೆಗೆ ಸಕಲ ರೀತಿಯ ಸಿದ್ಧತೆಯನ್ನು ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕಮಠದಲ್ಲಿ ನಡೆಸಲಾಗುತ್ತಿದ್ದು, ಇಂದು ಶುಕ್ರವಾರ ರಾತ್ರಿ 10 ಗಂಟೆಯಿಂದ ಶನಿವಾರ ಸಂಜೆ 4 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

3 ಲಕ್ಷಕ್ಕು ಅಧಿಕ ಭಕ್ತರು ಸೇರುವ ಲಕ್ಷಣಗಳಿದ್ದು, ಸುಮಾರು ಒಂದುವರೆ ಸಾವಿರದಷ್ಟು ಪೊಲೀಸರಿಂದ ಶ್ರೀಮಠದಲ್ಲಿನ ಭಕ್ತರಿಗೆ ಬಂದೋಬಸ್ತ್ ಒದಗಿಸಲಾಗಿದೆ.

ಅಂಬ್ಯುಲೆನ್ಸ್ ಸೇವೆ: ಶ್ರೀಗಳ ಅಗಲಿಕೆಗೆ ದು:ಖ ತಡೆಯಲಾಗದೆ ನೆರೆದಿರುವ ಭಕ್ತರಲ್ಲಿ ಅಲ್ಲಲ್ಲಿ ಕುಸಿದು ಬೀಳುತ್ತಿರುವದರಿಂದ ಮಠದ ಆವರಣದಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಮೂಲಕ ಅಸ್ವಸ್ಥರಾದವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳಿಸುತ್ತಿರುವದು ಸಾಮಾನ್ಯವಾಗಿದೆ.

Previous articleಕಾರವಾರ INS ಕದಂಬಾ ನೌಕಾನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Next articleಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡಿದರೆ ಹೈಕೋರ್ಟ್ ಮೆಟ್ಟಿಲೇರುತ್ತೇವೆ : ಡಾ. ಸಿ.ಇ ರಂಗಸ್ವಾಮಿ

LEAVE A REPLY

Please enter your comment!
Please enter your name here