Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ “ನಾವಿದ್ದ ಸ್ಥಳದ ಸನಿಹದಲ್ಲಿಯೇ ಐದಾರು ಬಾರಿ ಸ್ಫೋಟದ ಶಬ್ದ”

“ನಾವಿದ್ದ ಸ್ಥಳದ ಸನಿಹದಲ್ಲಿಯೇ ಐದಾರು ಬಾರಿ ಸ್ಫೋಟದ ಶಬ್ದ”

0
88

ಬಾಗಲಕೋಟೆ: ನಾವಿರುವ ಕಟ್ಟಡದ ಮೇಲಿನಿಂದಲೇ ಡ್ರೋನ್ ಹಾರಿರುವ ದೃಶ್ಯ ನೋಡಿದ್ದೇವೆ, ಸನಿಹದಲ್ಲಿಯೇ ಐದಾರು ಬಾರಿ ಡ್ರೋನ್‌ ಮೂಲಕ ಸ್ಫೋಟಗೊಂಡ ಶಬ್ಧವನ್ನು ಕೇಳಿ ಭಯಗೊಂಡಿದ್ದೇವು ಎಂದು ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಇಂಜಿನಿಯರ್‌ ಸಂಜೀವ ಮುನ್ನೋಳ್ಳಿ ತಿಳಿಸಿದ್ದಾರೆ.

ಸದ್ಯ ದುಬೈನ ಬರ್ ಪ್ರದೇಶದಲ್ಲಿ ವಾಸವಿರುವ ಸಂಜೀವ ಮುನ್ನೋಳ್ಳಿ ಅವರು `ಸಂಯುಕ್ತ ಕರ್ನಾಟಕ’ದೊಂದಿಗೆ ಮಾತನಾಡಿ, ಅಲ್ಲಿರುವ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

“ನಾವಿರುವ ಕಟ್ಟಡದ ಬಳಿಯೇ ಶನಿವಾರ ಸಂಜೆಯಿಂದ ರವಿವಾರ ಮಧ್ಯಾಹ್ನದವರೆಗೆ ಐದಾರು ಬಾರಿ ಡ್ರೋನ್‌ಗಳಿಂದ ಅಟ್ಯಾಕ್ ಆಗಿದೆ, ವಾಸವಿರುವ ಕಟ್ಟಡದ ಮೇಲಿನಿಂದಲೇ ಡ್ರೋನ್ ಹಾರಿರುವ ದೃಶ್ಯ ನೋಡಿ ಕೆಲ ಹೊತ್ತು ಭಯಗೊಂಡಿದ್ದೇವು” ಎಂದು ಅವರು ಹೇಳಿದರು.

ಇದನ್ನೂ ಓದಿ: ಬಾಂಬ್‌ ದಾಳಿಯ ದೃಶ್ಯಗಳನ್ನು ಬಿಡುಗಡೆ ಮಾಡಿದ ಇಸ್ರೇಲ್

“ರವಿವಾರ ಮಧ್ಯಾಹ್ನ ಊಟ ತರಲೆಂದು ಹೊರಗಡೆ ಹೋದಾಗ ಮತ್ತೇ ಡ್ರೋನ್ ಸಮೀಪವೇ ಅಟ್ಯಾಕ್ ಮಾಡಿತು. ನಾವಿರುವ ಪ್ರದೇಶದಲ್ಲಿಯೇ ಭಾರತ ಪಾಕ್ ಸೇರಿದಂತೆ ಇತರೆ ದೇಶಗಳ ರಾಯಭಾರಿ ಕಚೇರಿಗಳಿವೆ. ಅವುಗಳ ಸಮೀಪವೇ ಈ ದಾಳಿ ನಡೆದಿರುವ ಶಬ್ಧ ಕೇಳಿದೆ. ಸದ್ಯ ನಾವಿರುವ ಸ್ಥಳದಲ್ಲಿ ಸುರಕ್ಷಿತವಾಗಿದ್ದೇವೆ.” ಎಂದು ಅವರು ತಿಳಿಸಿದ್ದಾರೆ.

“ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ದುಬೈನ ಮಿಡಿಯಾ ಸಿಟಿಯಲ್ಲಿಂದ ದೃಶ್ಯ ನೋಡಿದಾಗ ಜುಮೇರಾವೆಂಬ ಪ್ರದೇಶದಲ್ಲಿ ಡ್ರೋನ್ ಮೂಲಕ ದಾಳಿ ನಡೆದಿರುವದನ್ನು ಕಣ್ಣಾರೆ ಕಂಡಿದ್ದೇನೆ. ಇಲ್ಲಿನ ಸರ್ಕಾರವೂ ಸಹಿತ ಕಟ್ಟೆಚ್ಚರದಿಂದ ಇರಲು ಆದೇಶ ಮಾಡಿದೆ.” ಎಂದು ತಿಳಿಸಿದರು.