ಬಾಗಲಕೋಟೆ: ಸಿಎಂ ಬದಲಾವಣೆ ವಿಷಯ ಹೈಕಮಾಂಡ್‌ಗೆ ಬಿಟ್ಟ ವಿಷಯವಾಗಿದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ತಮ್ಮನ್ನು ಭೆಟ್ಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳನ್ನು ನೀವು ಸುಮ್ಮನೆ ಇರೋದಕ್ಕೆ ಬಿಡುವುದಿಲ್ಲ. ಬೆಳಗ್ಗೆ ಎದ್ದರೆ ನಮ್ಮಂಥವರು ಸಿಕ್ಕರೆ ಮೈಕ್ ಹಿಡಿಯುತ್ತೀರಿ. ನಾಯಕತ್ವ ಬದಲಾವಣೆ ಅಂತ ಹೇಳಿ ನಿಮ್ಮಿಂದಾನೇ ಅದು ದೊಡ್ಡದಾಗಿ ಹೋಗಿದೆ. ಆ ಥರ ಏನಾದರೂ ಇದ್ದರೆ ನಾವೇ ಹೇಳುತ್ತೇವೆ ಎಂದರು.
ಪಕ್ಷದಲ್ಲಿ ಆ ಕಡೆ, ಈ ಕಡೆ 10 ಜನ ಇದ್ದಾರೆ. ಎರಡೂ ಕಡೆಯವರು ಮೈಕ್ ಸಿಕ್ಕಿದ ತಕ್ಷಣ ಒಂದು ಹೇಳಿಕೆ ನೀಡುತ್ತಾರೆ. ಅದರಿಂದ ಗೊಂದಲ ಸೃಷ್ಟಿಯಗಿದೆ ಎಂದರು.
ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ವಿಷಯವಾಗಿ ಮಾತನಾಡಿದ ಅವರು, ಈ ಸಂಬಂಧ ದಾಖಲೆಗಳಿದ್ದರೆ ಲೋಕಾಯುಕ್ತ, ರಾಜ್ಯಪಾಲರು ಇಲ್ಲವೇ ಸಿಎಂಗೆ ಕೊಡಲಿ ಅವರು ಕ್ರಮ ವಹಿಸುತ್ತಾರೆ ಎಂದರು.























