2ರಂದು ಹೊಸಪೇಟೆಗೆ ನರೇಂದ್ರ ಮೋದಿ

0
29
modi

ಬಳ್ಳಾರಿ: ವಿಧಾನ ಸಭಾ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮೇ 2ರಂದು ಹೊಸಪೇಟೆಗೆ ಬರಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮುರಹರ ಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಜಿಲ್ಲೆಯ 10 ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಹೊಸಪೇಟೆಗೆ ಬರಲಿದ್ದಾರೆ ಎಂದರು.
ಬಳ್ಳಾರಿಗೆ ಬರಲು ಸಹ ನಮ್ಮ ನಾಯಕರು ಮನವಿ ಮಾಡಿದ್ದಾರೆ. ಇನ್ನು ಅವರ ಆಗಮನದ ಕುರಿತು ಖಚಿತತೆ ಇಲ್ಲ. ಮೋದಿ ಅವರ ಜೊತೆಗೆ ನಟ ಸುದೀಪ್, ಪವನ್ ಕಲ್ಯಾಣ್, ಯುಪಿ ಸಿಎಂ ಯೋಗಿ ಅಡಿತ್ಯನಾಥ್ ಸೇರಿದಂತೆ ವಿವಿಧ ನಾಯಕರನ್ನು ನಮ್ಮ ಜಿಲ್ಲೆಯಲ್ಲಿ ಪ್ರಚಾರ ಮಾಡಲು ಆಹ್ವಾನ ಮಾಡಲಾಗಿದೆ ಎಂದು ಅವರು ತಿಳಿಸಿದರು.
27 ರಂದು ಪ್ರಧಾನಿ ಮೋದಿ ಅವರು ವರ್ಚ್ಯುವಲ್ ಸಭೆ ಮೂಲಕ ಬೂತ್ ಮಟ್ಟದ ಪ್ರತಿನಿಧಿಗಳ ಜೊತೆ ಸಂವಾದ ಮಾಡಲಿದ್ದಾರೆ ಎಂದರು.

Previous article18 ಲಕ್ಷ ಹಣ, 8 ಕೆಜಿ ಬೆಳ್ಳಿ ನಾಣ್ಯ ವಶಕ್ಕೆ
Next articleಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್