ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ

0
14

ಮಂಗಳೂರು: ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಗರದ ಕದ್ರಿಯಲ್ಲಿ ಹೊಟ್ಟೆಯಲ್ಲಿ ಮಲ ತುಂಬಿಕೊಂಡು ಅಸ್ವಸ್ಥಗೊಂಡಿದ್ದ ಹೆಬ್ಬಾವನ್ನು ಉರಗ ರಕ್ಷಕ ಧೀರಜ್ ಗಾಣಿಗ ಅವರು ಪತ್ತೆ ಹಚ್ಚಿದ್ದಾರೆ. ಬಳಿಕ ವೈದ್ಯರ ಬಳಿಗೆ ತಂದಿದ್ದಾರೆ.
೧೩ ಕೆಜಿ ತೂಕದ ಹೆಬ್ಬಾವಿಗೆ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಮಲ ತುಂಬಿದ್ದು ಪತ್ತೆಯಾಗಿತ್ತು. ಹೀಗಾಗಿ ಮೂರು ಗಂಟೆಗಳ ಕಾಲ ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್, ಸಮೀಕ್ಷಾ ರೆಡ್ಡಿಯವರ ತಂಡ ಹೆಬ್ಬಾವಿಗೆ ಚಿಕಿತ್ಸೆ ಮಾಡಿದ್ದಾರೆ. ಬಳಿಕ ಹೆಬ್ಬಾವು ಸ್ವಸ್ಥಗೊಂಡಿದ್ದು, ಹೆಬ್ಬಾವನ್ನು ಮರಳಿ ಕಾಡಿಗೆ ಬಿಟ್ಟಿದ್ದಾರೆ.

Previous articleಬೀದರ್ ಡಿಸಿಸಿ ಬ್ಯಾಂಕ್ ಚುನಾವಣೆ: ಅಮರ ಖಂಡ್ರೆ ಪೆನಲ್‌ಗೆ ಮೇಲುಗೈ
Next articleಏಷ್ಯನ್ ಗೇಮ್ಸ್: ಚಿನ್ನ, ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ