Home ನಮ್ಮ ಜಿಲ್ಲೆ ಹೆದ್ದಾರಿಯಲ್ಲಿ ಹೆಡೆ ಎತ್ತಿದ ನಾಗರಹಾವು

ಹೆದ್ದಾರಿಯಲ್ಲಿ ಹೆಡೆ ಎತ್ತಿದ ನಾಗರಹಾವು

0
164

ಇಳಕಲ್: ಸೋಲಾಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿ ೫೦ ರ ಪ್ರಕಾಶ ಡಾಬಾ ಹತ್ತಿರದಲ್ಲಿ ನಾಗರಹಾವು ಹೆಡೆ ಎತ್ತಿ ನಿಂತ ಪ್ರಸಂಗ ನಗರದಲ್ಲಿ ನಡೆದಿದೆ. ವಾಹನಭರಿತ ಹೆದ್ದಾರಿಯಲ್ಲಿಯೇ ಈ ನಾಗರಹಾವು ಹೆಡೆ ಎತ್ತಿ ನಿಂತಾಗ ಲಾರಿ ಮತ್ತು ಬಸ್‌ಗಳು ಪಕ್ಕದಿಂದ ಸಾಗಿ ಹಾವಿಗೆ ಏನೂ ಆಗದಂತೆ ಚಾಲಕರು ನೋಡಿಕೊಂಡಿದ್ದಾರೆ. ಬೈಕ್‌ಗಳ ಮೇಲೆ ಹೊರಟ ಕೆಲವು ಜನರು ಧೈರ್ಯ ಮಾಡಿ ತಮ್ಮ ತಮ್ಮ ಬೈಕ್ ಗಳನ್ನು ಪಕ್ಕಕ್ಕೆ ನಿಲ್ಲಿಸಿ ನಾಗರಹಾವನ್ನು ಸುರಕ್ಷಿತವಾಗಿ ಜಮೀನಿನತ್ತ ಓಡಿಸಿದ್ದಾರೆ ಗೆಳೆಯನೊಬ್ಬನಿಗೆ ಹುನಗುಂದಕ್ಕೆ ಬಿಡಲು ಹೊರಟಿದ್ದ ಅಹಮದ್ ಗೋಗಿ ಎಂಬುವವರು ಈ ನಾಗರಹಾವಿನ ಪ್ರಸಂಗವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿ ಅದನ್ನು ಪತ್ರಿಕೆಗೆ ಕಳಿಸಿದ್ದಾರೆ. ವಿಚಿತ್ರವೆಂದರೆ ನಾಗರಹಾವು ಹೆದ್ದಾರಿಯಲ್ಲಿಯೇ ಕೆಲವೊಂದಿಷ್ಟು ತತ್ತಿಗಳನ್ನು ಇಟ್ಟಿದ್ದು ಕಂಡು ಬಂದಿದೆ. ಪರಿಸರ ಕಾಳಜಿ ಹೊಂದುವತ್ತ ಜನರು ಮುಂದುವರೆಯುತ್ತಿದ್ದು ಅಪಾಯಕಾರಿ ಪ್ರಾಣಿಗಳನ್ನು ಕೊಲ್ಲದೇ ಅವುಗಳನ್ನು ಸುರಕ್ಷಿತವಾಗಿ ಸಾಗ ಹಾಕುತ್ತಿದ್ದಾರೆ. ಎಲ್ಲಾ ಅಪ್ಪು ಗಂಧದಗುಡಿಯ ಪರಿಣಾಮ ಎನ್ನಬಹುದೇ….

https://twitter.com/samyuktakarnat2/status/1697857587486613576