Home Advertisement
Home ನಮ್ಮ ಜಿಲ್ಲೆ ಹುಲಿ ದಾಳಿಗೆ ಇಬ್ಬರ ಸಾವು: ಹುಲಿ ಸೆರೆಗೆ ಸಿದ್ಧತೆ

ಹುಲಿ ದಾಳಿಗೆ ಇಬ್ಬರ ಸಾವು: ಹುಲಿ ಸೆರೆಗೆ ಸಿದ್ಧತೆ

0
115

ಮಡಿಕೇರಿ: ಹುಲಿ ದಾಳಿಗೆ ಸಿಲುಕಿ ಸೋಮವಾರ ಬೆಳಗ್ಗೆ ಕೇರಳ ಗಡಿಭಾಗ ಪಲ್ಲೇರಿ ಗ್ರಾಮದಲ್ಲಿ ಕೃಷಿ ಕಾರ್ಮಿಕ ರಾಜು (75) ಮೃತಪಟ್ಟಿದ್ದಾರೆ. ಭಾನುವಾರ ಸಂಜೆ ಹುಲಿ ದಾಳಿಗೆ ಕಾರ್ಮಿಕ ಯುವಕ ಚೇತನ್ (18) ಮೃತಪಟ್ಟ ಅನತಿ ದೂರದಲ್ಲಿಯೇ ಈ ಘಟನೆ ನಡೆದಿದೆ. ಮನುಷ್ಯರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಹುಲಿ ಕಾಫಿ ತೋಟದಲ್ಲಿಯೇ ಸುಳಿದಾಡುತ್ತಿದ್ದು ಕಾರ್ಮಿಕರ ಆತಂಕ ಹೆಚ್ಚಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ 2ಕ್ಕೇರಿದೆ. ಸೋಮವಾರ ರಾಜು ಅವರ ಮೇಲೆ ಕಾಫಿ ತೋಟದಲ್ಲಿ ಅಡಗಿದ್ದ ಹುಲಿ ದಿಢೀರನೇ ದಾಳಿ ನಡೆಸಿದೆ. ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಾಗರಹೊಳೆ ಎಸಿಎಫ್ ಗೋಪಾಲ್ ಮತ್ತು ಹುಲಿ ಕಾರ್ಯಾಚರಣೆ ಪಡೆಯ ಸಿಬ್ಬಂದಿ ತೆರಳಿದ್ದಾರೆ. ರಾಜು ಅವರನ್ನು ಕೊಂದ ಹುಲಿ ಕಾಫಿ ತೋಟದಲ್ಲಿ ಅಡಗಿರುವುದು ಗೋಚರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನು ಸೆರೆ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.