ಹುಬ್ಬಳ್ಳಿ: ಕೆಲ ರೈಲುಗಳ ನಿಲುಗಡೆ ತಾತ್ಕಾಲಿಕ ರದ್ದು

0
11
ರೈಲು

ಹುಬ್ಬಳ್ಳಿ: ಪ್ಲಾಟ್ ಫಾರ್ಮ್ಗೆ ಸಂಬಂಧಿಸಿದ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಕೆಳಕಂಡ ರೈಲುಗಳಿಗೆ ಉಗಾರಖುರ್ದ, ಶೇಡಬಾಳ ಮತ್ತು ವಿಜಯನಗರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ ೧೭೩೩೧/೧೭೩೩೨ ಮಿರಜ್-ಹುಬ್ಬಳ್ಳಿ-ಮಿರಜ್ ಎಕ್ಸ್ಪ್ರೆಸ್, ರೈಲು ಸಂಖ್ಯೆ ೦೭೩೫೨/೦೭೩೫೧ ಲೋಂಡಾ-ಮಿರಜ್-ಲೋಂಡಾ ಎಕ್ಸ್ಪ್ರೆಸ್ ವಿಶೇಷ ಮತ್ತು ರೈಲು ಸಂಖ್ಯೆ ೧೭೩೩೩/೧೭೩೩೪ ಮಿರಜ್-ಕ್ಯಾಸೆಲ್‌ರಾಕ್-ಮಿರಜ್ ಎಕ್ಸ್ಪ್ರೆಸ್ ರೈಲುಗಳಿಗೆ ಜೂನ್ ೨೦ರವರೆಗೆ ಉಗಾರಖುರ್ದ, ಶೇಡಬಾಳ ಮತ್ತು ವಿಜಯನಗರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ.
ಜೂನ್ ೨೦ರವರೆಗೆ ಪ್ರಯಾಣ ಆರಂಭಿಸುವ ರೈಲು ಸಂಖ್ಯೆ ೧೬೫೮೯/೧೬೫೯೦ ಕೆಎಸ್‌ಆರ್ ಬೆಂಗಳೂರು-ಮಿರಜ್-ಕೆಎಸ್‌ಆರ್ ಬೆಂಗಳೂರು ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ಮತ್ತು ರೈಲು ಸಂಖ್ಯೆ ೧೭೪೧೫/೧೭೪೧೬ ತಿರುಪತಿ-ಕೋಲ್ಹಾಪುರ-ತಿರುಪತಿ ಹರಿಪ್ರಿಯ ಎಕ್ಸ್ಪ್ರೆಸ್ ರೈಲುಗಳಿಗೆ ಉಗಾರಖುರ್ದ ನಿಲ್ದಾಣದಲ್ಲಿ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

Previous articleಉಡುಪಿಯಲ್ಲಿ ಶಕ್ತಿ ಯೋಜನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಚಾಲನೆ
Next articleಭಾರತಕ್ಕೆ ಹೀನಾಯ ಸೋಲು