ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ : ರೇಣುಕಾಚಾರ್ಯ

0
15
RENUKACHARYA

ದಾವಣಗೆರೆ: ನಮಗೆ ದೇಶ ಮುಖ್ಯ ಜಾತಿಯಲ್ಲ. ಕ್ಷೇತ್ರದ ಜನರು ನಮ್ಮನ್ನು ಜಾತಿ ಆಧಾರದಲ್ಲಿ ಮತಹಾಕಿಲ್ಲ. ಹಿಂದುತ್ವವೇ ನಮ್ಮ ಉಸಿರಾಗಿದ್ದು, ನಮ್ಮ ಮಗ ಹಿಂದುತ್ವ ಪ್ರತಿಪಾದನೆ ಮಾಡುತ್ತಿದ್ದ. ಆದ್ದರಿಂದ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿಯ ರಾಯಣ್ಣ ವೃತ್ತದ ಮೂಲಕ ದೇವನಾಯ್ಕನಹಳ್ಳಿ, ಗೊಲ್ಲರಹಟ್ಟಿ ಮಾರ್ಗವಾಗಿ ಮಾಸಡಿ, ಹನುಮನಹಳ್ಳಿ ಮೂಲಕ ರೇಣುಕಾಚಾರ್ಯರ ಹುಟ್ಟೂರಾದ ಕುಂದೂರಿನ ಪ್ರಮುಖ ರಸ್ತೆಯಲ್ಲಿ ಅಂತಿಮಯಾತ್ರೆ ನಡೆಸಿ, ನಂತರ ಕುಂದೂರಿನ ತೋಟದಲ್ಲಿ ಮೃತ ಚಂದ್ರು ಅವರ ಅಜ್ಜಿ, ತಾತನ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದು ಹೇಳಿದರು.

Previous articleಕೊಚ್ಚಿ ಕೊಚ್ಚಿ ತುಂಡು ಮಾಡಿ ನಾಯಿಗೆ ಬಿಸಾಕುತ್ತೇವೆ: ಮುತಾಲಿಕ್‌ಗೆ ಜೀವ ಬೆದರಿಕೆ ಕರೆ
Next articleಚಂದ್ರು ಅಪಘಾತವಲ್ಲ ಹತ್ಯೆ: ರಮೇಶ್ ದೂರು