ಹರಿಪ್ರಸಾದ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ

0
26

ಚಿಕ್ಕಮಗಳೂರು: ಹರಿಪ್ರಸಾದ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಡೂರು ತಾಲೂಕಿನ ಬೀರೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ರೀತಿಯ ಹೇಳಿಕೆ ಏಕೆ ನೀಡಿದ್ದಾರೋ ಗೊತ್ತಿಲ್ಲ. ಇವರ ಹೇಳಿಕೆ ಬಗ್ಗೆ ಟೀಕೆ ಮಾಡುವುದಿಲ್ಲ. 2007ರಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಬಂದು, ಈ 17 ಜನ ಮಾಡಿದಂತೆಯೇ ಚುನಾವಣೆಯನ್ನು ಎದುರಿಸಿದ್ದರು. ಹರಿಪ್ರಸಾದ್ ಅವರ ಹೇಳಿಕೆ ಈ 17 ಜನ ಶಾಸಕರಿಗೆ ಅನ್ವಯಿಸಿದರೆ, ಖುದ್ದು ಅವರಿಗೂ ಅನ್ವಯಿಸುವುದಿಲ್ಲವೇ ಎಂಬುದನ್ನು ಅವರು ಯೋಚಿಸಬೇಕು ಎಂದರು.

Previous articleಅಸೆಂಬ್ಲಿಯಲ್ಲಿ ಲಂಚದ ಹಣ ಪ್ರದರ್ಶನ
Next articleಗಿಲ್‌ ಡಬಲ್‌ ಸೆಂಚೂರಿ