ಹರಕೆಯ ನೇಮೋತ್ಸವ

0
23
ಹರಕೆ

ಮಂಗಳೂರು: ವಿಧಾನ ಪರಿಷತ್ ಸದಸ್ಯರಾದ ಯು. ಬಿ. ವೆಂಕಟೇಶ್‌ರವರ ಕುಟುಂಬದ ಹಿರಿಯರು ಆರಾಧಿಸಿಕೊಂಡು ಬಂದಿರುವ ವರಾಹಮೂರ್ತಿ ಹಾಗೂ ವಾರ್ತಾಳಿ ದೈವಗಳ ಹರಕೆಯ ನೇಮೋತ್ಸವ ಉಡುಪಿ ಜಿಲ್ಲೆ ಪಡುಬಿದ್ರಿಯ ಯುಪಿಸಿಎಲ್ ಕಾಲೋನಿ ಲಕ್ಷ್ಮಿ ವೆಂಕಟೇಶ ನಿಲಯದ ವಠಾರ ಜಯಲಕ್ಷ್ಮಿಯವರ ಮನೆಯಲ್ಲಿ ಮಂಗಳವಾರ ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿದ್ಯುಕ್ತವಾಗಿ ನೆರವೇರಿತು.
ಸಂಜೆ ದೈವಗಳ ಭಂಡಾರ ಹೊರಟು, ಬ್ರಾಹ್ಮಣಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆಯ ನಂತರ ದೈವಗಳ ನೇಮೋತ್ಸವ ನಡೆಯಿತು. ನೇಮೋತ್ಸವದಲ್ಲಿ ಯು. ಬಿ. ವೆಂಕಟೇಶ್, ವಿಶಾಲ ಯು. ಬಿ. ವೆಂಕಟೇಶ್ ಸಹಿತ ಮನೆ ಮಂದಿ, ಗಣ್ಯರು, ಊರವರು ಪಾಲ್ಗೊಂಡಿದ್ದರು.

Previous articleಮಗುವನ್ನು ಕಣ್ತುಂಬಿಕೊಳ್ಳಬೇಕಿದ್ದ ಯೋಧ ಮರಳಿದ್ದು ಶವವಾಗಿ
Next articleಆರೋಪದ ಬಗ್ಗೆ ಸಿದ್ದರಾಮಯ್ಯರನ್ನ ಆಣೆ ಮಾಡಲು ಧರ್ಮಸ್ಥಳಕ್ಕೆ ಆಹ್ವಾನಿಸಿದ ಭೈರತಿ ಬಸವರಾಜ್!