ಹಣ ದುರ್ಬಳಕೆ: ಸೇವೆಯಿಂದ ವಿಮುಕ್ತಿ

0
16

ಚಿತ್ರದುರ್ಗ: ಚಿತ್ರದುರ್ಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಮೂಡಲಗಿರಿಯಪ್ಪ ಮತ್ತು ಸತೀಶ್ ಕಲ್ಲಹಟ್ಟಿ ಅವರನ್ನ ಹುದ್ದೆಯಿಂದ ತೆಗೆದುಹಾಕಿ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ.
ಭೂ ವಿಜ್ಞಾನ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಚಿತ್ರದುರ್ಗ ಇವರು ಜಿಲ್ಲಾ ಖನಿಜಾ ಪ್ರತಿಷ್ಠಾನ ಟ್ರಸ್ಟ್‌ನ ಹಣ ದುರ್ಬಳಕೆಯಾಗಿರುವುದಾಗಿ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಮೂಡಲಗಿರಿಯಪ್ಪ ಮತ್ತು ಸತೀಶ್‌ ಕಲ್ಲಟ್ಟಿ ಅವರಗಳ ಮೇಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವನ್ನು ರಚಿಸಿ ತನಿಖಾ ತಂಡದಿಂದ ವರದಿಯನ್ನು ಪಡೆದು ಜಿಲ್ಲಾಧಿಕಾರಿಗಳು ಜೂನ್‌ 23, 2023ರಿಂದ ಜಾರಿಗೆ ಬರುವಂತೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಮೂಡಲಗಿರಿಯಪ್ಪ ಮತ್ತು ಸತೀಶ್‌ ಕಲ್ಲಟ್ಟಿ ಅವರನ್ನ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಿಮುಕ್ತಿಗೊಳಿಸಿ ಆದೇಶಿಸಿದ್ದಾರೆ.

Previous articleನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ
Next articleಬಾಕಿ ಬಿಲ್‍ ಬಿಡುಗಡೆಗೆ ಗುತ್ತಿಗೆದಾರರ ಸಂಘದಿಂದ ಸಿಎಂಗೆ ಮನವಿ