ಸ್ಯಾಂಟ್ರೋ ರವಿ ಪ್ರಕರಣ: ಗೂಡಂಗಡಿ ಮಾಲಕನ ತನಿಖೆ

0
14
ರವಿ

ಮಂಗಳೂರು: ಸ್ಯಾಂಟ್ರೋ ರವಿ ಉಡುಪಿ ಜಿಲ್ಲೆ ಕಾರ್ಕಳ ಹೆಬ್ರಿಯ ಗೂಡಂಗಡಿಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಅಂಗಡಿ ಮಾಲಕನನ್ನು ಮೈಸೂರು ಪೊಲೀಸರು ತನಿಖೆಗೊಳಪಡಿಸಿದ್ದಾರೆ.
ಸ್ಯಾಂಟ್ರೋ ರವಿ ಹೆಬ್ರಿಯಿಂದ ಆಗುಂಬೆ ತೆರಳುವ ರಸ್ತೆಯಲ್ಲಿರುವ ಹೆಬ್ರಿಯ ರಮೇಶ್ ಕುಲಾಲ್ ಅವರ ಗೂಡಂಗಡಿಗೆ ಭೇಟಿ ನೀಡಿ ರಮೇಶ್ ಕುಲಾಲ್ ಮೊಬೈಲ್ ಪಡೆದು ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಹೆಬ್ರಿಗೆ ಆಗಮಿಸಿ ತನಿಖೆ ನಡೆಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ರಮೇಶ್ ಕುಲಾಲ್ ಅವರನ್ನು ಠಾಣೆಗೆ ಕರೆಸಿ ರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ಬಳಿಕ ಅವರ ಮೊಬೈಲ್‌ನ್ನು ವಶಕ್ಕೆ ಪಡೆದು ಕಳುಹಿಸಿಕೊಟ್ಟಿದ್ದಾರೆ.

Previous articleಹಿಂದೂ ಸಂಘಟನೆ ಮುಖಂಡ – ಅನುಮಾನಸ್ಪದ ಸಾವು
Next articleನಾಡದೋಣಿ ಮೀನುಗಾರರಿಗೆ ಹೆಚ್ಚುವರಿ ಸೀಮೆಎಣ್ಣೆ