ಹುಬ್ಬಳ್ಳಿ: ಕುಂದಗೋಳ ವಿಧನಾಸಭಾ ಕ್ಷೇತ್ರದಲ್ಲಿ ನಾನೇ ಕಾಂಗ್ರೆಸ್ ಕ್ಯಾಂಡಿಡೇಟ್, ಯಾರು ಏನೇ ಮಾಡಿದ್ರು ಟಿಕೆಟ್ ತಪ್ಪಿಸಲು ಆಗುವುದಿಲ್ಲ ಎಂದು ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ನಗರದ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದ ಅವರು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಮನವಿ ಸಲ್ಲಿಸಲು ಆಗಮಿಸಿದ್ದೇನು. ಕೆಲವೊಂದು ಕಾರ್ಯಗಳಿಗೆ ಅನುಮೋದನೆ ಪಡೆಯಬೇಕಿತ್ತು. ಆ ಕಾರಣದಿಂದ ಭೇಟಿಯಾಗಿದ್ದೇನೆ ಅಷ್ಟೆ. ಇದನ್ನ ಹೊರತು ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದರು.
ಕುಂದಗೋಳ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಭಿನ್ನಮತದಿಂದ ಪ್ರಜಾಧ್ವನಿ ಕಾರ್ಯಕ್ರಮ ರದ್ದಾಗಿಲ್ಲ. ಕಲಘಟಗಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಇಂದೇ ಆಯೋಜನೆ ಮಾಡಲಾಗಿದೆ. ಇದರಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸಮಯದ ಅಭಾವದಿಂದ ಪ್ರಜಾಧ್ವನಿ ರದ್ದಾಗಿದೆ ಎಂದರು.
Home ನಮ್ಮ ಜಿಲ್ಲೆ ಧಾರವಾಡ ಸಿಎಂ ಭೇಟಿಯಾದ ಶಾಸಕಿ ಕುಸುಮಾವತಿ ಶಿವಳ್ಳಿ:ಕುಂದಗೋಳ ಕ್ಷೇತ್ರದಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ