ಸಾವಿನಲ್ಲೂ ಒಂದಾದ ದಂಪತಿ

0
13

ವಿಜಯಪುರ : ಅವರಿಬ್ಬರು ಒಂದು ಜೀವ ಎರಡು ಹೃದಯ, ಒಬ್ಬರೊನೊಬ್ಬರು ಬಿಟ್ಟಿರಲಾರದಷ್ಟು ಪವಿತ್ರ ಬಾಂಧವ್ಯ, ಈ ಬಾಂಧವ್ಯ ಎಷ್ಟು ಗಟ್ಟಿ ಎಂದರೆ ಸಾವಿನಲ್ಲೂ ಈ ದಂಪತಿ ಒಂದಾದರು. ಸತಿ-ಪತಿಗಳಿಬ್ಬರು ಒಂದೇ ದಿನ ಇಹಲೋಕ ತ್ಯೇಜಿಸುವುದರ ಮೂಲಕ ತಮ್ಮ ೫೦ ವರ್ಷಗಳ ಸಾರ್ಥಕ ದಾಂಪತ್ಯ ಜೀವನಕ್ಕೆ ಕೊನೆ ಹೇಳಿರುವ ಅಪರೂಪದ ಘಟನೆ ಡೋಣೂರ ಗ್ರಾಮದಲ್ಲಿ ನಡೆದಿದೆ.
ಬಸವನ ಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ರಾಮಪ್ಪ ಕಾಡಪ್ಪ ಟಕ್ಕಳಕಿ(೭೦), ಶಾಂತವ್ವ ರಾಮಪ್ಪ ಟಕ್ಕಳಕಿ(೬೦) ಎಂಬ ಇಬ್ಬರೂ ದಂಪತಿ ಸಾವಿನಲ್ಲೂ ಒಂದಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಓರ್ವ ಪುತ್ರ ಹಾಗೂ ಇಬ್ಬರೂ ಹೆಣ್ಣು ಮಕ್ಕಳನ್ನು ಹೊಂದಿರುವ ದಂಪತಿ ೫೦ ವರ್ಷಗಳ ಸುಖ ಸಂಸಾರಕ್ಕೆ ಸಾಕ್ಷಿಯಾಗಿದ್ದರು. ಪತ್ನಿ ಶಾಂತವ್ವ ಟಕ್ಕಳಕಿ ಅನಾರೋಗ್ಯದಿಂದ ರವಿವಾರ ನಸುಕಿನಜಾವ ಅಸುನಿಗುತ್ತಿದ್ದಂತೆ, ಆಘಾತಕ್ಕೊಳಗಾದ ಪತಿ ರಾಮಪ್ಪ ಹೃದಯಾಘಾತದಿಂದ ಮೃತಪಟ್ಟಿದಾರೆ.

Previous articleಜನ ಮೆಚ್ಚುವ ಹಾಗೆ ಆಡಳಿತ
Next articleರಸ್ತೆ ಅಪಘಾತ: ಚಿಕ್ಕ ಮಕ್ಕಳು ಸೇರಿ ಆರು ಜನರ ಸಾವು