ಬಳ್ಳಾರಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಒಂದೇ ಒಂದು ಹೊಸ ಬಸ್ ಖರೀದಿ ಆಗದೆ ಇರುವುದರ ಸಮಸ್ಯೆ ಏನು ಎಂಬುದಕ್ಕೆ ತಾಜಾ ನಿದರ್ಶನ ಸಾರಿಗೆ ಸಚಿವರ ತವರಲ್ಲೆಯೇ ಅನಾವರಣಗೊಂಡಿದೆ.
ಕಂಪ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕೊರೋನ ಕಾಲದಲ್ಲಿ ನಿಲುಗಡೆ ಅದ ಬಸ್ ಸಂಚಾರ ಇನ್ನು ಆರಂಭ ಆಗಿಲ್ಲ. ಇದೆ ಕಾರಣಕ್ಕೆ ಗ್ರಾಮದ ವಿದ್ಯಾರ್ಥಿಗಳು ಪಡಬಾರದ ಪಾಡು ಪಟ್ಟಿ ಶಾಲೆಗೆ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಮಲಾಪುರದ ಟೆಲಿಕಾಂ ಉದ್ಯೋಗಿ ಮಲ್ಲಿಕಾರ್ಜುನ್ ತೆಗೆದಿರುವ ಈ ವಿಡಿಯೋದಲ್ಲಿ ಮಕ್ಕಳು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಪ್ರಯಾಣ ಮಾಡುತ್ತಿರುವುದು ಕಂಡುಬಂದಿದೆ. ಇಲ್ಲಿನ ಅರಳಿಹಳ್ಳಿ, ಸಾಣಾಪುರ ಗ್ರಾಮಗಳಿಗೆ ತೆರಳಲು ಸಾರಿಗೆ ವ್ಯೆವಸ್ಥೆ ಇಲ್ಲದೆ ಕಾರಣ ತಾಲ್ಲೂಕು ಕೇಂದ್ರ ಕಂಪ್ಲಿಯಿಂದ ಸಣ್ಣ ಸಣ್ಣ ಮಕ್ಕಳು ಅತಿ ಟಾಪ್ ಮೇಲೆ ಕುಳಿತು ಪ್ರಯಾಣ ಮಾಡುತ್ತಿರುವುದು ಕಂಡುಬಂದಿದೆ. ಅದೂ ಅಲ್ಲದೆ ಆಟೋ ಚಾಲಕ ಮೊದಲೇ ದುರಸ್ತಿಗೆ ಬಂದ ರಸ್ತೆಯಲ್ಲಿ ಯದ್ವ ತದ್ವ ವೇಗವಾಗಿ ಆಟೋ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಗಣರಾಜ್ಯೋತ್ಸವದ ಇಂದಿನ ದಿನವೇ ಇಂತಹ ದೃಶ್ಯ ಕಂಡುಬಂದಿರುವುದು ನಮ್ಮ ಗಣತಂತ್ರದ ಮೂಲಕ ನಮ್ಮ ನಾಯಕರು ಜನರಿಗೆ ಕೊಟ್ಟ ಕೊಡುಗೆ ಏನು ಎಂಬುದನ್ನು ಪ್ರಶ್ನೆ ಮಾಡುವ ಹಾಗೆ ಇದೆ.