ಬೆಂಗಳೂರು: ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯವನ್ನು ಹೊಡೆದು ಓಡಿಸಿ ಎಂದು ಶಾಸಕ ಮುನಿರತ್ನ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಈಗ ಅವರ ವಿರುದ್ಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಕ್ರೈಸ್ತ ಧರ್ಮದ ಹಕ್ಕುಚ್ಯುತಿ ಮತ್ತೆ ಗಲಭೆ ಪ್ರಚೋದನಕಾರಿ ಹೇಳಿಕೆ ಹಿನ್ನಲೆಯಲ್ಲಿ ಈಗ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಚುನಾವಣಾಧಿಕಾರಿ ಮನೋಜ್ ಕುಮಾರ್ ದೂರು ನೀಡಿರುವ ಹಿನ್ನೆಲೆ ಆರ್ ಆರ್ ನಗರ ಪೊಲೀಸರು ಕೇಸ್ ದಾಖಲಿಸಿದ್ದಾರೆ.