ಬಳ್ಳಾರಿ:ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಮಕ್ಕಳು ಸಾವಿಗೀಡಾದ ಘಟನೆ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚೌಡಿಕಿ ಕುಟುಂಬಕ್ಕೆ ಸೇರಿದ ಮಣಿಕಂಠ(೧೪), ಹರ್ಷವರ್ಧನ(೯) ಮೃತರು. ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ಮಕ್ಕಳು ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಗುತ್ತಿಗನೂರು ಗ್ರಾಮದಲ್ಲಿ ನಡೆದ ಅಂಬಾದೇವಿ ಜಾತ್ರೆಗೆ ಬಂದ ಮಕ್ಕಳು ಶೌಚಕ್ಕೆ ತೆರಳಿದಾಗ ಘಟನೆ ಸಂಭವಿಸಿದೆ.
ಜಾತ್ರೆ ಬಂದ ಒಂದೇ ಕುಟುಂಬದ ಮೂವರು ಮಕ್ಕಳು ಶೌಚಕ್ಕೆ ತೆರಳಿದ್ದರು. ಮೊದಲ ಮತ್ತು ಮೂರನೇ ಮಗ ಹಳ್ಳದಲ್ಲಿ ಮೃತ ಪಟ್ಟಿದ್ದರೆ, ಮಧ್ಯದ ಹುಡುಗ ಬದುಕುಳಿದ್ದಿದ್ದಾನೆ, ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.