ವೃದ್ಧನಿಗೆ ಸಾರಿಗೆ ಬಸ್‌ ಡಿಕ್ಕಿ: ಸ್ಥಳದಲ್ಲೇ ಮೃತ್ಯು

0
18

ಕಲಬುರಗಿ: ಬಹಿರ್ದೆಸೆಗೆಂದು ತೆರಳಿದ್ದ ವೃದ್ಧನಿಗೆ ಕೆಕೆಆರ್‌ಟಿಸಿ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಚಿಂಚೋಳಿ ತಾಲೂಕಿನ ಯಂಪಳ್ಳಿ ಗ್ರಾಮದ ಬಳಿ ರಸ್ತೆ ದಾಟುತ್ತಿದ್ದ ವೃದ್ಧನಿಗೆ ಕೆಕೆಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಕ್ಕಯ್ಯಾ (68) ಮೃತ ದುರ್ದೈವಿ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಕೆರೆಯಲ್ಲಿ ಮುಳುಗಿ ಸಹೋದರರ ದುರ್ಮರಣ
Next articleಸಮುದ್ರದ ಸುಳಿಗೆ ಸಿಲುಕಿದವರ ರಕ್ಷಣೆ