ವೀರ ಯೋಧನಿಗೆ ಪುಷ್ಪ ನಮನ

ಕುಷ್ಟಗಿ: ಪಂಜಾಬಿನ ಪತೀಂದ ಪ್ರದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಸೈನಿಕನಿಗೆ ಏಕಾಏಕಿಯಾಗಿ ಹೃದಯಘಾತವಾಗಿ ಮೃತಪಟ್ಟ ಘಟನೆ ಮೇ.೯ ರಂದು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ,ತಾಲೂಕು ಆಡಳಿತ ವತಿಯಿಂದ ಸಕಲ ಗೌರವದೊಂದಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಮೃತಪಟ್ಟ ಕುಷ್ಟಗಿ ತಾಲೂಕಿನ ಕಡಿವಾಲ ಗ್ರಾಮದ ವೀರ ಯೋದ ವೀರಪ್ಪ ಕರಿಯಪ್ಪ ಹಿರೇಹಾಳ ವೀರಯೋಧನ ಶವವನ್ನು ಕುಷ್ಟಗಿ ಪೊಲೀಸ್ ಠಾಣೆಗೆ ಮೇ.೧೧ ರ ರಾತ್ರಿ ತರಲಾಗಿತ್ತು. ಮೇ.೧೨ ರ ಬೆಳಗ್ಗೆ ಜಿಲ್ಲಾಡಳಿತದ ವತಿಯಿಂದ ಕೊಪ್ಪಳ ಉಪವಿಭಾಗ ಅಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ,ತಹಶೀಲ್ದಾರ ಕೆ.ರಾಘವೇಂದ್ರರಾವ್,ಕುಷ್ಟಗಿ ತಾಲೂಕು ಮಾಜಿ ಸೈನಿಕರು ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಕಂಬನಿ ಮಿಡಿದರು.


ಪಾರ್ಥಿವ ಶರೀರವನ್ನು ಸ್ವ- ಗ್ರಾಮಕ್ಕೆ : ತಾಲೂಕಿನ ಕಡಿವಾಲ ಗ್ರಾಮದ ವೀರಪ್ಪ ಕರಿಯಪ್ಪ ಹಿರೇಹಾಳ (39) ಮೃತ ವೀರ ಸೇನಾನಿ, ಭಾರತ ಮಾತೆಯ ಸೇವೆಗಾಗಿ ಪಂಜಾಬನ ಪತೀಂದ ಪ್ರದೇಶದ ಸೇನಾ ಆರ್ಮಿ ತುಕುಡಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮೇ.೯ ರಂದು ರಾತ್ರಿ7-30ಕ್ಕೆ ಹೃದಯಘಾತವಾಗಿದೆ.  ತಕ್ಷಣ ಆರ್ಮಿಯ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ ವೈದ್ಯರು ಚಿಕಿತ್ಸೆ ನೀಡಿದರು ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಮೃತದೇಹವನ್ನು ಸಕಲ ಗೌರವದೊಂದಿಗೆ ಆಂಬುಲೆನ್ಸ್ ಮೂಲಕ ಮತ್ತು ಪೊಲೀಸ್ ಭದ್ರತೆಯಲ್ಲಿ ಸ್ವ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು. ಇದೇ ವೇಳೆ ಮಾಜಿ ಸೈನಿಕರು ಬೋಲೋ ಭಾರತ್ ಮಾತಾ ಕಿ ಜೈ, ಒಂದೇ ಮಾತರಂ ಹೇ ಮೇರೆ ವತನ್, ಹೇ ಮೇರೆ ವತನ್ ಜವಾನ್ ಎಂಬ ಘೋಷಣೆಯನ್ನು ಕೂಗಿದರು.ಘಟನೆಯ ಕುರಿತು ಕಮಾಂಡೆಂಟ್ ಎಂ ರವಿ,ಸೈನಿಕ ಎಸ.ಬಿ.ಪಾಟೀಲ ಘಟನೆ ಕುರಿತು ಮಾಹಿತಿ ನೀಡಿದರು.