ವೀರಯೋಧನ ವೃತ್ತಕ್ಕೆ ಹಸಿರು ಹೊದಿಕೆ ಆಕ್ರೋಶ

0
26
ವೀರಯೋಧನ ವೃತ್ತಕ್ಕೆ ಹಸಿರು ಹೊದಿಕೆ ಆಕ್ರೋಶ

ವೀರಯೋಧನ ವೃತ್ತಕ್ಕೆ ಹಸಿರು ಹೊದಿಕೆ ಹಾಕಿದ್ದ ಚಿತ್ರ..


ಸಂ.ಕ. ಸಮಾಚಾರ, ಮಂಗಳೂರು: ವೀರ ಯೋಧನ ಹೆಸರಿನಲ್ಲಿ ನಿರ್ಮಾಣಗೊಂಡಿದ್ದ ವೃತ್ತಕ್ಕೆ ಹಸಿರು ಬಟ್ಟೆ ಸುತ್ತಿದ ಹಿನ್ನೆಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡ ಘಟನೆ ಪುತ್ತೂರಿನ ಈಶ್ವರಮಂಗಲ ಎಂಬಲ್ಲಿ ನಡೆದಿದೆ.
26/11 ಮುಂಬೈ ಉಗ್ರರ ದಾಳಿಯಲ್ಲಿ ಮೃತಪಟ್ಟ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೆನಪಿಗಾಗಿ ಈಶ್ವರಮಂಗಲ ಸರ್ಕಲ್‌ನಲ್ಲಿ ಈ ವೃತ್ತ ನಿರ್ಮಿಸಲಾಗಿತ್ತು. ಆದರೆ ಇಂದು ಮುಂಜಾನೆ ವೃತ್ತದ ಸುತ್ತ ಹಸಿರು ಬಟ್ಟೆ ಸುತ್ತಿ, ಹಸಿರು ಬಾವುಟಗಳನ್ನು ಹಾಕಲಾಗಿತ್ತು. ಇದರಿಂದ ಆಕ್ರೋಶಿತಗೊಂಡಿರುವ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತಕ್ಷಣ ಹಸಿರು ಹೊದಿಕೆ ತೆಗೆಯುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಇದೀಗ ಹಸಿರು ಹೊದಿಕೆಯನ್ನು ತೆರವು ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಗಿದೆ.

Previous articleಸಾಮಾಜಿಕ ಕಾರ್ಯಕರ್ತ ಬಂಧನ ಬಿಡುಗಡೆ
Next articleಅಹಮದಬಾದ್‌ನಲ್ಲಿ ಕನ್ನಡ ಭವನ ಸರಕಾರ ನಿಶಾನೆ