ವಿಷಪೂರಿತ ಆಹಾರ ಸೇವನೆ: ಮೊರಾರ್ಜಿ ದೇಸಾಯಿ ಶಾಲೆಯ 38 ಮಕ್ಕಳು ಅಸ್ವಸ್ಥ

0
13

ದಾವಣಗೆರೆ: ವಿಷಪೂರಿತ ಆಹಾರ ಸೇವನೆಯಿಂದ ಸುಮಾರು 38 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಾವಣಗೆರೆ ತಾಲ್ಲೂಕಿನ ಮಾಯಕೊಂಡದಲ್ಲಿ ನಡೆದಿದೆ.
ತಾಲ್ಲೂಕಿನ ‌ಮಾಯಕೊಂಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ರಾತ್ರಿ ಊಟ ಸೇವಿಸಿ ಮಲಗಿದ್ದಾರೆ. ಬೆಳಿಗ್ಗೆಯಿಂದಲೇ ಹೊಟ್ಟೆ ನೋವು ಆರಂಭವಾಗಿದೆ. ನಂತರ ಬೆಳಿಗ್ಗೆ ಉಪಹಾರ ಸೇವಿಸಿದ ಬಳಿಕ ಅನಾರೋಗ್ಯ ಬಿಗಡಾಯಿಸಿದ್ದು ವಾಂತಿ-ಭೇದಿ ಶುರುವಾಗಿದೆ.
ಕೂಡಲೇ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಕ್ಕಳನ್ನು ರವಾನೆ ಮಾಡಿ ಚಿಕಿತ್ಸೆ ಮಾಡಲಾಗುತ್ತಿದೆ. ಅದರಲ್ಲಿ 6 ಮಕ್ಕಳ ಸ್ಥಿತಿ ಗಂಭಿರವಾಗಿರುವುದರಿಂದ ಅವೆನದನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸುಮಾರು 200 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಮಂಗಳವಾರ ಮಧ್ಯಾಹ್ನ ಉಳಿದಿದ್ದ ಚಿಕನ್ ಸಾಂಬರ್ ಮತ್ತು ಬೆಳಿಗ್ಗೆಯ ಪಲಾವ್ ನ್ನ ರಾತ್ರಿಗೆ ಮಕ್ಕಳಿಗೆ ನೀಡಲಾಗಿತ್ತು. ಹಾಸ್ಟೇಲ್ ವಾರ್ಡನ್ ವಿರುದ್ದ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ, ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಇನ್ನುಮುಂದೆ ಹಿಗಾಗದಂತೆ ಸ್ವಚ್ಛತೆ ಕಾಪಾಡುವ ಜತೆಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.

Previous articleಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು
Next articleಕೃಷ್ಣನಗರಿಯಲ್ಲಿ ಅಷ್ಟಮಿ ಸಂಭ್ರಮ