ವಿವಾಹ ನಿಶ್ಚಯವಾಗಿದ್ದ ಯುವತಿಯ ಕೊಲೆ

0
11
ಯುವತಿ

ದಾವಣಗೆರೆ: ವಿವಾಹ ನಿಶ್ಚಯವಾಗಿದ್ದ ಯುವತಿಯನ್ನು ಇಲ್ಲಿನ ಪಿ.ಜೆ. ಬಡಾವಣೆಯ ಚರ್ಚ್ ರಸ್ತೆಯಲ್ಲಿ ಗುರುವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಿನೋಬನಗರದ ಮಹಮ್ಮದ್ ಮುಸ್ತಫಾ ಅವರ ಮಗಳು ಚಾಂದ್ ಸುಲ್ತಾನ (28) ಕೊಲೆಯಾದ ಯುವತಿ.
ತೆರಿಗೆ ಸಲಹೆಗಾರರ ಕಚೇರಿಯಲ್ಲಿ ಚಾಂದ್ ಸುಲ್ತಾನ ಕೆಲಸ ಮಾಡುತ್ತಿದ್ದರು. ಹರಿಹರದ ಅಯೂಬ್ ಎಂಬ ಯುವಕನ ಜತೆಗೆ ಈಚೆಗೆ ಮದುವೆ ನಿಶ್ಚಯವಾಗಿತ್ತು. ಚಾಂದ್ ಸುಲ್ತಾನ ಅವರಿಗೆ ಈ ಮೊದಲೇ ಸಾದತ್ ಎನ್ನುವವನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಕಾರಣಾಂತರಗಳಿಂದ ಮುರಿದುಬಿದ್ದಿತ್ತು. ಈಗ ಪೊಲಿಸರಿಗೆ ಅನುಮಾನ ತೀವ್ರಗೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Previous articleತಜ್ಞರ ಸಲಹೆ ಪಡೆದು ಮುಂದಿನ ಕ್ರಮ: ಸಿಎಂ
Next articleಗದಗ ಶಿಕ್ಷಕನಿಂದ ಹಲ್ಲೆಗೊಳಗಾದ ಶಿಕ್ಷಕಿ ಸಾವು