ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ತಾಯಿ ಇಬ್ಬರು ಮಕ್ಕಳ ಸಾವು

0
9

ಕಲಬುರಗಿ: ವಿದ್ಯುತ್‌ ತಗುಲಿದ ಪರಿಣಾಮ ಒಂದೇ ಕುಟುಂಬದ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದ ಧನಗರಗಲ್ಲಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಝರಣಮ್ಮ 40 , ಮಹೇಶ್ 22 , ಸುರೇಶ್ 20 ಎಂದು ಗರುತಿಸಲಾಗಿದೆ. ನಿನ್ನೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನಿನ್ನೆ ತಡರಾತ್ರಿ ಚಿಂಚೋಳಿ ತಾಲ್ಲೂಕಿನಾದ್ಯಂತ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ಕಟ್ಟಾಗಿ ವಿದ್ಯುತ್ ತಂತಿ ಬಿದ್ದಿದ್ದು, ಮಳೆ ಬರುವಾಗ ತೊಗರಿ ಹೊಟ್ಟಿಗೆ ಪ್ಲ್ಯಾಸ್ಟಿಕ್ ಚೀಲದಿಂದ ಮುಚ್ಚೋಕೆ ಹೋದಾಗ ಮನೆ ಎದರು ನಿಂತಿದ್ದ ನೀರಿನಲ್ಲಿ ಕಟ್ ಆಗಿ ಬಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್‌ ಪಸರಿಸಿ ತಾಯಿಗೆ ಮೊದಲು ವಿದ್ಯುತ್ ಶಾಕ್ ಹೊಡೆದಿದೆ, ತಾಯಿಯನ್ನ ವಿದ್ಯುತ್ ಶಾಕ್ ನಿಂದ ಬಿಡಿಸೋದಕೆ ಹೊದ ಇಬ್ಬರು ಮಕ್ಕಳಿಗೆ ಒಬ್ಬಾರದ ನಂತರ ಒಬ್ಬರಿಗೆ ಶಾಕ್‌ ಹೊಡೆದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ತಂದೆ ಅಂಬಣ್ಣನಿಗೆ ಗಂಭಿರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಿಶೀಲನೆ ನಡೆಸಿದ್ದಾರೆ.

Previous articleಡಿಮಾನ್ಸ್‌ನಲ್ಲಿ ವಿಚಾರಣಾಧೀನ ಕೈದಿ ಸಾವು
Next articleಶಿವಮೊಗ್ಗ: ಡಿಸಿ ಕಚೇರಿ ಆವರಣದಲ್ಲಿ ಆಜಾನ್ ಕೂಗಿದ ಯುವಕ: ಇದಕ್ಕೆ ಬಿಜೆಪಿ ಕಾರಣ ಎಂದ ಕುಮಾರಸ್ವಾಮಿ