ವಿಘ್ನ ನಿವಾರಣೆಗೆ ಕೈ ನಾಯಕರಿಂದ ಪೂಜೆ

0
18

ಪ್ರಜಾಧ್ವನಿ ಯಾತ್ರೆ ಆರಂಭಕ್ಕೆ ಮೊದಲು ಕೋಲಾರ ಜಿಲ್ಲೆಯ ಮುಳಬಾಗಿಲು ಕುರುಡುಮಲೆ ವಿನಾಯಕ ದೇವಾಲಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಶುಕ್ರವಾರ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯದ ಎಲ್ಲಾ ವಿಘ್ನಗಳ ನಿವಾರಣೆಗೆ ಪೂಜೆ ಮಾಡಿಸಲಾಗಿದ್ದು, 1999 ರಲ್ಲಿ ಪಾಂಚಜನ್ಯ ಪೂಜೆ ಸಲ್ಲಿಸಿ ನಾವು ಅಧಿಕಾರಕ್ಕೆ ಬಂದಿದ್ದೇವು. ರಾಜ್ಯದ ಜನರಿಗೆ ವಿನಾಯಕ ಒಳತನ್ನುಂಟು ಮಾಡಲಿ, ನಮಗೆ ವಿಜಯ ದೊರೆಯಲಿ ಎಂದು ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಪ್ರಜಾಧ್ವನಿ ಯಾತ್ರೆಯಲ್ಲಿ ಬಸವಕಲ್ಯಾಣ, ಹಳೇ ಮೈಸೂರು ಭಾಗದಲ್ಲಿ ಶಾಸಕಾಂಗ ಪಕ್ಷದ ನಾಯಕರು, ನಾವು ಪ್ರಚಾರ ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಕೆ.ಎಚ್. ಮುನಿಯಪ್ಪ ಸಹ ನಮ್ಮ ಜೊತೆ ಬಂದಿದ್ದಾರೆ. ಕೋಲಾರದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲರೂ ಒಗ್ಗಟಾಗಿದ್ದೇವೆ. ನನ್ನ ಮೇಲೆ ವಿಪಕ್ಷದವರು ಬೇಕಾದಷ್ಟು ಸಿಬಿಐ ಪ್ರಯೋಗ ಮಾಡಲಿ ಅದನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದು ಹೇಳಿದರು.

Previous articleಸಂಚಾರಿ ಇ ಚಲನ್ ನಲ್ಲಿ ದಾಖಲಾಗಿರುವ ಪ್ರಕರಣ ದಂಡದ ಮೊತ್ತದಲ್ಲಿ ಶೇ 50 ರಿಯಾಯಿತಿ: ಸರ್ಕಾರದ ಆದೇಶ
Next articleಮುನಿಯಪ್ಪ ಬೆಂಬಲಿಗರ ಬಹಿರಂಗ ಬಂಡಾಯ