ವಾಹನ ಢಿಕ್ಕಿ ಚಿರತೆ ಸಾವು

0
17

ಕಾರ್ಕಳ: ವೇಗವಾಗಿ ಸಾಗುತಿದ್ದ ಕಾರಿಗೆ ಢಿಕ್ಕಿ ಹೊಡೆದು ಚಿರತೆಯೊಂದು ಸಾವಿಗೀಡಾದ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿ ಕಾರ್ಕಳ ರಸ್ತೆಯ ಭಕ್ರೆ ಮಠ ಕ್ರಾಸ್ ಬಳಿ ನಡೆದಿದೆ.
ಕಾರ್ಕಳದಿಂದ ಮುದ್ರಾಡಿ ಕಡೆಗೆ ವೇಗವಾಗಿ ಸಾಗುತಿದ್ದ ಇನ್ನೋವಾ ಕಾರು ರಸ್ತೆ ಕಡೆಗೆ ಏಕಾಏಕಿ ನುಗ್ಗಿದ ಚಿರತೆಗೆ ಢಿಕ್ಕಿ ಹೊಡೆದ ಪರಿಣಾಮ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿದ್ದಾರೆ.

Previous articleಮತ್ತಷ್ಟು ಇಂದಿರಾ ಕ್ಯಾಂಟೀನ್ ಆರಂಭ
Next articleಬೆಳಗಾವಿ-ದೆಹಲಿ ವಿಮಾನದಲ್ಲಿ ಕನ್ನಡದಲ್ಲೇ ಸ್ವಾಗತ