ವಾಟರ್‌ ಹೀಟರ್‌ಗೆ ತಾಯಿ, ಮಗು ಬಲಿ

0
13

ಹೊಸಕೋಟೆ : ಸ್ನಾನದ ಕೋಣೆಯಲ್ಲಿ ಬಕೆಟ್‌ನೊಳಗೆ ನೀರು ಕಾಯಿಸಲು ಹಾಕಿದ್ದ ವಾಟರ್‌ ಹೀಟರ್‌ ಬಕೆಟ್‌ ಮೈಮೇಲೆ ಬಿದ್ದು ತಾಯಿ ಹಾಗೂ 4 ವರ್ಷದ ಮಗ ಮನೆಯಲ್ಲಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನಡೆದಿದೆ.
ದಿನನಿತ್ಯ ಬಳಸುವ ವಾಟರ್‌ ಹೀಟರ್‌ನಿಂದಲೇ ತಾಯಿ ಮಗ ಇಬ್ಬರೂ ಸಾವನ್ನಪ್ಪಿದ ದುರ್ಘಟನೆ ಈಗ ನಡೆದಿದೆ. ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನವೇ ಘಟನೆ ನಡೆದಿದ್ದು, ಇಂದು ಬೆಳಗ್ಗೆಯೂ ಮನೆಯಿಂದ ಯಾರೊಬ್ಬರೂ ಹೊರಗೆ ಬರದಿರುವುದನ್ನು ಕಂಡು ನೆರೆಹೊರೆಯವರು ಮನೆಗೆ ಹೋಗಿ ನೋಡಿದ್ದಾರೆ. ಈ ವೇಳೆ ಮಹಿಳೆ ಮತ್ತು ಮಗು ಸಾವನ್ನಪ್ಪಿರುವುದು ಕಂಡುಬಂದಿದೆ. ಪ್ರತಿನಿತ್ಯದಂತೆ ಸ್ನಾದ ಕೋಣೆಯಲ್ಲಿರುವ ಸಣ್ಣ ಕಟ್ಟೆಯ ಮೇಲೆ ಬಕೆಟ್‌ನಲ್ಲಿ ನೀರನ್ನು ತುಂಬಿಸಿ ಇಟ್ಟು, ಅದರೊಳಗೆ ಕರೆಂಟ್‌ ವಾರ್ ಹೀಟರ್‌ ಹಾಕಿದ್ದಾರೆ. ಈ ವೇಳೆ ಮಗ ಸ್ನಾನದ ಕೋಣೆಯೊಳಗೆ ಹೋದಾಗ ಬಕೆಟ್‌ ಜಾರಿಬಿದ್ದು, ಕರೆಂಟ್‌ ಇದ್ದ ಹೀಟರ್‌ ಮಗನಿಗೆ ತಾಗಿದೆ. ಕರೆಂಟ್‌ ಶಾಕ್‌ ಹೊಡೆದು ಕೂಗಿಕೊಂಡ ಮಗನನ್ನು ರಕ್ಷಣೆ ಮಾಡಲು ತಾಯಿ ಓಡಿ ಬಂದಿದ್ದಾರೆ. ಆದರೆ, ಬಿಸಿ ನೀರು ಸ್ನಾನದ ಕೋಣೆಯಲ್ಲಿ ತುಂಬಿಕೊಂಡಿದ್ದು, ಅದರಲ್ಲಿ ಕರೆಂಟ್‌ ಕೂಡ ಹರಿಯುತ್ತಿತ್ತು. ಇದನ್ನು ನೋಡದೇ ಕರೆಂಟ್‌ ಶಾಕ್‌ಗೆ ಒಳಗಾಗಿದ್ದ ಮಗನನ್ನು ರಕ್ಷಿಸಲು ಮುಂದಾದಾಗ ತಾಯಿಗೂ ಕರೆಂಟ್‌ ಶಾಕ್‌ ಉಂಟಾಗಿದೆ. ಹೀಗಾಗಿ, ತಾಯಿ ಜ್ಯೋತಿ ಹಾಗೂ ಮಗ ಧನಂಜಯ ಇಬ್ಬರೂ ಸ್ನಾನದ ಕೋಣೆಯಲ್ಲಿಯೇ ಮೃತಪಟ್ಟಿದ್ದಾರೆ.

Previous articleಇಂದು ಮರೆಯಲಾಗದ ಶುಭದಿನ: ಬಿಎಸ್‌ವೈ
Next articleವಿಮಾನ ನಿಲ್ದಾಣ ಆವರಣದಲ್ಲಿ ಆಕಸ್ಮಿಕ ಬೆಂಕಿ