ಲೋಕಾಯುಕ್ತರ ಬಲೆಗೆ ಬಿದ್ದ ಪಿಡಿಓ ಲಿಂಗಾಚಾರಿ

0
12
ಲಿಂಗಾಚಾರಿ

ದಾವಣಗೆರೆ: ಇ-ಸ್ವತ್ತು ಕೊಡಲು ರೈತನಿಂದ ಎರಡು ಸಾವಿರ ಲಂಚ ಸ್ವೀಕರಿಸುವ ವೇಳೆ ಕಕ್ಕರಗೊಳ್ಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬ (ಪಿಡಿಓ) ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದ ಪಿಡಿಓ ಲಿಂಗಾಚಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ರೈತ ಮಂಜುನಾಥರಿಂದ ನಗರದ ಕೊಂಡಜ್ಜಿ ರಸ್ತೆ ಆರ್‌ಟಿಓ ಕಚೇರಿ ಬಳಿ ಎರಡು ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಈ ಹಿಂದೆಯೂ ಒಮ್ಮೆ ಲಂಚ ಸ್ವೀಕರಿಸುವ ವೇಳೆ ಇವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಆ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ಈಗ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾನೆ. ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್ಪಿ ರಾಮಕೃಷ್ಣ ಹಾಗೂ ಇನ್ಸ್‌ಪೆಕ್ಟರ್ ಆಂಜನೇಯ ದಾಳಿ ನಡೆಸಿ ಲಿಂಗಾಚಾರಿಯನ್ನು ಬಂಧಿಸಿದ್ದಾರೆ.

Previous articleನಿಪ್ಪಾಣಿಯಲ್ಲಿ ಎಡಿಜಿಪಿ ನೇತೃತ್ವದಲ್ಲಿ ಸಭೆ: ಶಾಂತಿ ಸುವ್ಯವಸ್ಥೆಗೆ ಖಡಕ್ ಸೂಚನೆ
Next articleಸರಕಾರಿ ಕರ್ತವ್ಯಕ್ಕೆ ಅಡ್ಡಿ, ಬಸ್‌ಗೆ ಹಾನಿ: ಆರೋಪಿಗಳಿಗೆ ಶಿಕ್ಷೆ