Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಲವ್ ಜಿಹಾದ್ ವಿರುದ್ಧ ಪೋಸ್ಟರ್ ಜಾಗೃತಿ

ಲವ್ ಜಿಹಾದ್ ವಿರುದ್ಧ ಪೋಸ್ಟರ್ ಜಾಗೃತಿ

0
96
LOVE

ಮಂಗಳೂರು: ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳು ಜಾಗೃತಿ ಪೋಸ್ಟರ್ ಬಿಡುಗಡೆ ಮಾಡಿ ಹೋರಾಟಕ್ಕಿಳಿದಿದ್ದಾರೆ.
ಹಿಂದೂ ಯುವತಿಯರು ಮುಸ್ಲಿಂ ಯುವಕರ ಮೋಸಕ್ಕೆ ಬಲಿಯಾಗಬೇಡಿ ಎಂದು ಜಾಗೃತಿ ತಿಳಿಸುವ, ದೆಹಲಿಯಲ್ಲಿ ಶ್ರದ್ಧಾಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಅಫ್ತಾಬ್‌ನ ಫೋಟೋ ಹಾಕಿ ಅಲ್ಲಲ್ಲಿ ಪೋಸ್ಟರ್ ಅಂಟಿಸಲಾಗುತ್ತಿದೆ.
ಲವ್ ಜಿಹಾದ್ ವಿರುದ್ಧ ಪ್ರತ್ಯೇಕ ಕಾನೂನಿಗೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿ ಡಿ. ೧೧ರಿಂದ ೧೭ರವರೆಗೆ ರಾಜ್ಯಾದ್ಯಂತ ಅಭಿಯಾನ ನಡೆಸಲಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಪುತ್ತೂರು ನಗರದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಯಾಗಬೇಕು ಎಂದು ಹಿಂದೂಪರ ಸಂಘಟನೆಗಳ ಪೋಸ್ಟರ್‌ಗಳು ಗೋಚರಿಸಿದೆ.
ಅಫ್ತಾಬ್ ಶ್ರದ್ಧಾಳನ್ನು ಕೊಂದು ೩೫ ತುಂಡುಗಳಾಗಿ ಕತ್ತರಿಸಲು ಲವ್ ಜಿಹಾದ್ ಕಾರಣ ಎಂದು ಪೋಸ್ಟರ್ ಹೇಳುತ್ತದೆ.

Previous articleಗಡಿ ಕ್ಯಾತೆ, ಮಹಾರಾಷ್ಟ್ರಕ್ಕೆ ತಿರುಗುಬಾಣ
Next articleಬೀಫ್ ಬಿರಿಯಾನಿ ಹೋಟೆಲ್‌ಗೆ ದಾಳಿ