ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

0
8
ಪತ್ನಿಗೆ ಬೆದರಿಸಿದ ಪತಿ

ಚಿಕ್ಕಮಗಳೂರು: ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಜಿಲ್ಲೆ ಬಾಳೆಹೊನ್ನೂರಿನಲ್ಲಿ ನಡೆದಿದೆ.
ರೌಡಿ ಶೀಟರ್ ಪೂರ್ಣೇಶ್ ಬಾಳೆಹೊನ್ನೂರು ಪೊಲೀಸರಿಂದ ಫೈರಿಂಗ್ ನಡೆದಿದೆ.
ವಾರಂಟ್ ಜಾರಿಯಾಗಿದ್ದರೂ ಕೋರ್ಟಿಗೆ ಹೋಗದ ಪೂರ್ಣೇಶ್‌ನನ್ನು ಬಂಧಿಸಲು ಸೋಮವಾರ ಬೆಳಗ್ಗೆ ಹೋದಾಗ ಆತ ಪೊಲೀಸರ ಮೇಲೆ ಫೈರಿಂಗ್ ಹಾಗೂ ಪೊಲೀಸರ ಮೇಲೆಯೇ ಚಾಕುವಿಂದ ಹಲ್ಲೆಗೈದಾಗ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ರೌಡಿಯಿಂದ ಹಲ್ಲೆಗೊಳಗಾದ ಪೇದೆ ಮಂಜುನಾಥ್ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿ ಪೂರ್ಣೇಶ್ ನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದರೂ ಮಾತು ಕೇಳದ ಪೂರ್ಣೇಶ್ ಕಾಲಿಗೆ ಪಿ.ಎಸ್.ಐ.‌ ದಿಲೀಪ್ ಕುಮಾರ್ ಫೈರಿಂಗ್ ಮಾಡಿದ್ದಾರೆ.

Previous articleಅಧಿಕಾರಿ ಪಟ್ಟೆದ್ ಮನೆ ಮೇಲೆ ಲೋಕಾ ದಾಳಿ
Next articleಸುಳ್ಳಿನ ಉಪಾಸನೆಯೇ ನಿಮ್ಮ ನಿತ್ಯಕರ್ಮವೆ