ರಾಹುಲ್ ಗಾಂಧಿ ಬೂಸ್ಟರ್ ಡೋಸ್ ಫೇಲ್!

0
13
ರಾಮುಲು

ಧಾರವಾಡ: ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಕಾಂಗ್ರೆಸ್‌ಗೆ ನೀಡಿದ ಬೂಸ್ಟರ್ ಡೋಸ್ ವಿಫಲಗೊಂಡಿದ್ದು, ಈಗ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರ ಮಧ್ಯೆ ಮತ್ತೆ ಕಿತ್ತಾಟ ಶುರುವಾಗಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಭಾರತ ಜೋಡೊ ಯಾತ್ರೆಯಲ್ಲ ಅದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಜೋಡಿಸಲು ಕೈಗೊಂಡ ಯಾತ್ರೆ. ಇಬ್ಬರು ನಾಯಕರನ್ನು ಜೋಡಿಸಲು ರಾಹುಲ್ ಗಾಂಧಿಗೆ ಸಾಧ್ಯವಾಗಿಲ್ಲ. ಸಂಧಾನ ಮಾಡಲು ಮುಖಂಡರಿಗೆ ಸಾಧ್ಯವಾಗಿಲ್ಲ. ರಾಹುಲ್ ಬೂಸ್ಟರ್ ಡೋಸ್ ವಿಫಲವಾಗಿದೆ. ಸಿಎಂ ಹುದ್ದೆಗಾಗಿ ಉಭಯ ನಾಯಕರ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ಆದರೆ ಮುಖ್ಯಮಂತ್ರಿ ಹುದ್ದೆ ಸದ್ಯಕ್ಕೆ ಖಾಲಿಯಿಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದು, ಮುಂದೆ ಕೂಡ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಮನಗಾಣಬೇಕು ಎಂದು ತಿಳಿಸಿದರು.

Previous articleಲೋಕಾಯುಕ್ತ ಬಲೆಗೆ ಜೆಸ್ಕಾಂ ಅಧಿಕಾರಿ
Next articleಚೋರ್ಲಾ ಘಾಟ್‌ನಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ