ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ

0
7

ಮಂಗಳೂರು: ಕರ್ನಾಟದಲ್ಲಿ ಬಿಜೆಪಿ ಸರಕಾರದಿಂದ ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇದರಿಂದಾಗಿ ಮುಂದಿನ ಚುನಾವಣೆಯಲ್ಲೂ ಬಿಜೆಪಿ ಸರಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳ ನವ ಭಾರತ ನಿರ್ಮಾಣ ಕನಸಿಗೆ ಕರ್ನಾಟಕವೂ ಕೈಜೋಡಿಸಿದೆ. ಇಲ್ಲಿನ ಡಬಲ್ ಎಂಜಿನ್ ಸರಕಾರ ಪ್ರಧಾನ ಮಂತ್ರಿಗಳ ಆಶಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಅವಧಿಯಲ್ಲಿ ಬಾಕಿ ಉಳಿದಿರುವ ಯೋಜನೆಗಳು ಪೂರ್ಣಗೊಳ್ಳುವ ಮೂಲಕ ನವಭಾರತದ ಜತೆಗೆ ನವ ಕರ್ನಾಟಕವೂ ನಿರ್ಮಾಣವಾಗಲಿದೆ ಎಂದರು.

Previous articleವಾಹನಕ್ಕೆ ಡಿಕ್ಕಿ ಹೊಡೆದು ಚಿರತೆ ಸಾವು!
Next articleವೈದ್ಯಕೀಯ ನಿರ್ಲಕ್ಷ್ಯ: ಪ್ರಸೂತಿ ತಜ್ಞೆಗೆ 11.10 ಲಕ್ಷ ದಂಡ