ರಾಜಕೀಯ ದುರುದ್ದೇಶದಿಂದ ಮಹಾ ಕ್ಯಾತೆ

0
15
Dr Sudhakar K

ಹುಬ್ಬಳ್ಳಿ: ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ಮೊದಲು ನಾವು ಭಾರತೀಯರು ಎಂಬುದನ್ನು ಅರಿತು ನಾವು ಬದುಕಬೇಕು. ರಾಜಕೀಯ ದುರುದ್ದೇಶದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಸಚಿವರು ಗಡಿ ಬಗ್ಗೆ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಹಾಗೂ ಮಹಾರಾಷ್ಟçದ ನೆರೆ ಜನರು ಪ್ರೀತಿ ವಿಶ್ವಾಸದಿಂದ ಇರುವ ಸಂದರ್ಭದಲ್ಲಿ ಈ ರೀತಿ ಕೆಲ ರಾಜಕೀಯದ ಮಾತುಗಳು ನಮ್ಮ ಪ್ರೀತಿ, ವಿಶ್ವಾಸ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುತ್ತ್ತಿವೆ ಎಂದರು. ಕಾನೂನಿಗೆ ಗೌರವ ಕೊಡುವ ಯಾವುದೇ ರಾಜಕಾರಣಿ ಸುಪ್ರೀಂ ಕೋರ್ಟ್ ನೀಡುವ ಆದೇಶಕ್ಕೆ ಎದುರು ನೋಡಬೇಕು. ನಮ್ಮ ಮುಂದೆ ಮಹಾಜನ ವರದಿ ಇದೆ. ೧೯೫೬ ರಾಜ್ಯಗಳ ಪುನರ್ ವಿಂಗಡೆನೆಯಾದ ಸಂದರ್ಭದಲ್ಲಿ ಆಗಿರುವಂತ ನಿರ್ಧಾರಗಳು. ಈಗ ಬಂದು ಕೆಲ ಕರ್ನಾಟಕದ ಹಳ್ಳಿಗಳು ನಮ್ಮವು ಎಂದು ಮಹಾರಾಷ್ಟçದವರು ಹೇಳಿದ ತಕ್ಷಣ ಹೇಳಿದರೆ ಇದಕ್ಕೆ ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಎಳ್ಳಷ್ಟು ಬೆಲೆ ಇಲ್ಲ ಎಂದು ಹೇಳಿದರು.
ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದಿದೆ. ಈಗಾಗಲೇ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ರಾಜ್ಯದ ಒಂದಿಂಚೂ ಭೂಮಿಯನ್ನ ಬೇರೆ ಯಾವುದೇ ರಾಜ್ಯಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ನೆಲ, ಜಲ, ಗಡಿ ವಿಚಾರ ಬಂದಾಗ ನಮ್ಮ ಎಲ್ಲ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಒಂದಾಗಿದ್ದೇವೆ. ಹೀಗಾಗಿ ಯಾರಿಗೂ ಆತಂಕ ಬೇಡ. ಕರ್ನಾಟಕ ಮಹಾರಾಷ್ಟçವಾಗಲಿ ಬೇರೆ ಇನ್ಯಾವ ರಾಜ್ಯಕ್ಕಾಗಲಿ ನಾವು ಒಂದಿಂಚೂ ಭೂಮಿಯನ್ನು ಕೊಡುವ ಪ್ರಶ್ನೆಯೇ ಇಲ್ಲ ಎಂದರು.

Previous articleಅಘೋಷಿತ ರಸ್ತೆತಡೆಯಿಂದ ಸುಸ್ತಾದ ಜನತೆ: ಕ್ಯಾರೇ ಎನ್ನದ ಅಧಿಕಾರಿಗಳು
Next articleರಾಜು ದೇಸಾಯಿ, ಸಿದ್ದು ಸವದಿ ಆರೋಪ-ಪ್ರತ್ಯಾರೋಪ