ಕಲಬುರಗಿ: ರೈಲ್ವೆ ಹಳಿ ಬಳಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ, ಕೊಲೆ ಶಂಕೆ ಎಂದು ವ್ಯಕ್ತವಾಗಿದೆ.
ಕಲಬುರಗಿ ನಗರದ ನಾಗನಹಳ್ಳಿ ರಸ್ತೆಯ ಫ್ಲೈಓವರ್ ಕೆಳಭಾಗದ ಹಳಿ ಬಳಿ ಘಟನೆ ನಡೆದಿದೆ.
ರಾಜಾಪುರ ಬಡಾವಣೆ ನಿವಾಸಿ ಉಮೇಶ್ ಪವಾರ್ (30) ಎಂದು ಗುರುತಿಸಲಾಗಿದೆ.
ಬಡಾವಣೆಯ ನಾಲ್ವರ ವಿರುದ್ಧ ಕುಟುಂಬಸ್ಥರ ಕೊಲೆ ಆರೋಪ ಮಾಡಿದ್ದಾರೆ.
ಟಿಪ್ಪರ್‌ನಲ್ಲಿ ಮರಳು ಸಾಗಾಟ ಕೆಲಸ ಮಾಡುತ್ತಿದ್ದ ಉಮೇಶ್ ಪವಾರ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ತಮ್ಮ ಮರಳು ಕೆಲಸಕ್ಕೆ ಉಮೇಶ್ ಅಡ್ಡಿಯಾಗ್ತಿದ್ದನೆಂಬ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಬಡಾವಣೆಯ ವ್ಯಕ್ತಿ ಜೊತೆ ಹಣಕಾಸು ವಿಚಾರಕ್ಕೆ ಸಹ ಜಗಳ ನಡೆದಿತ್ತು.
ನಾಲ್ವರು ಸೇರಿಕೊಂಡು ಉಮೇಶ್‌ನನ್ನ ಹತ್ಯೆ ಮಾಡಿ ರೈಲ್ವೆ ಹಳಿ ಬಳಿ ಶವ ಬಿಸಾಕಿರುವ ಆರೋಪವಿದೆ.
ಮೃತನ ಕುಟುಂಬದಲ್ಲಿಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.