Home News ಯತ್ನಾಳ ಹೇಳಿಕೆ ಹೈಕಮಾಂಡ್ ಗಮನಿಸುತ್ತೆ

ಯತ್ನಾಳ ಹೇಳಿಕೆ ಹೈಕಮಾಂಡ್ ಗಮನಿಸುತ್ತೆ

ಯತ್ನಾಳ ಹೇಳಿಕೆ ಹೈಕಮಾಂಡ್ ಗಮನಿಸುತ್ತೆ

ಚಿಕ್ಕೋಡಿ: ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಶಾಸಕ ಯತ್ನಾಳ ವಿಚಾರದಲ್ಲಿ ನಾನೇನೂ ಮಾತನಾಡುವುದಿಲ್ಲ. ಎಲ್ಲವನ್ನೂ ಹೈ ಕಮಾಂಡ್ ಗಮನಿಸುತ್ತಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ನಾರಾಯಣಸ್ವಾಮಿ ಶಾಸಕ ಯತ್ನಾಳ ವಿರುದ್ಧ ಅಸಮಧಾನ ಹೊರಹಾಕಿದರು.
ನಿಪ್ಪಾಣಿ ಪಟ್ಟಣದಲ್ಲಿ ಕೇಂದ್ರ ಸರಕಾರದ ವಯೋಶ್ರೀ ಯೋಜನೆಯಡಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಶಾಸಕ ಯತ್ನಾಳರ ವಿರುದ್ಧ ಪರೋಕ್ಷವಾಗಿ ಅಸಮಧಾನ ಹೊರಹಾಕಿದ ಸಚಿವರು, ಹಲವು ಸಮುದಾಯಗಳ ಬೇಡಿಕೆಯ ನಡುವೆ ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಿಸುವಲ್ಲಿ ಸಿಎಂ ಧೈರ್ಯ ತೋರಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಈ ರೀತಿಯ ಎದೆಗಾರಿಕೆ ಇರಲಿಲ್ಲ. ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿ ಸದನದಲ್ಲಿ ಮಂಡನೆ ಮಾಡುತ್ತಾರೆ ಎಂದರು.

Exit mobile version